6

ಪಾರ್ವತಿ ಹೊಟೇಲಿನಲ್ಲಿ ನಶೆಯ ತೀರ್ಥ: ಡಬ್ಬಾ ಡಾಬಾ ಮೇಲೆ ಪೊಲೀಸರ ದಾಳಿ!

ಕೊಡ್ಲಗದ್ದೆ ಬಳಿಯ ಪಾರ್ವತಿ ಡಾಬಾದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಸಿಕ್ಕಿವೆ.

ಕೇರಳದ ಸತೀಶಕುಮಾರ ಮಣಪಟ್ಟಿ ಎಂಬಾತ ಕೊಡ್ಲಗದ್ದೆಯಲ್ಲಿ ಪಾರ್ವತಿ ಎಂಬ ಹೊಟೇಲ್ ನಡೆಸುತ್ತಿದ್ದು, ಅಲ್ಲಿ ರಾಜಾರೋಷವಾಗಿ ಸರಾಯಿ ವ್ಯಾಪಾರ ಮಾಡುತ್ತಿದ್ದರು. ಫೆ 12ರ ನಸುಕಿನ 4 ಗಂಟೆಗೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ಆ ಹೊಟೇಲ್ ಮೇಲೆ ದಾಳಿ ಮಾಡಿದರು. ಆಗ, ಅಲ್ಲಿ 7 ಬಗೆಯ ಮದ್ಯದ ಪೌಚು ಹಾಗೂ ಬಾಟಲಿಗಳು ಕಾಣಿಸಿದವು.

ಈ ಮದ್ಯ ಮಾರಾಟಕ್ಕೆ ಪಡೆದ ಅನುಮತಿ ಪತ್ರ ತೋರಿಸುವಂತೆ ಪೊಲೀಸರು ಕೇಳಿದರು. ಆಗ, ಸತೀಶಕುಮಾರ ಮಣಪಟ್ಟಿ ಅನುಪತಿ ಇಲ್ಲದಿರುವ ಬಗ್ಗೆ ಒಪ್ಪಿಕೊಂಡರು. ಒಟ್ಟು 34320ರೂ ಮೌಲ್ಯದ ಸರಾಯಿಯನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page