6

ಹೋರಾಟಗಾರಿನಿಗೆ ಹುಟ್ಟು ಹಬ್ಬದ ಸಡಗರ

ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಫೆ 14ರಂದು 39ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ರವೀಂದ್ರನಗರದ ಅವರ ಬೆಂಬಲಿಗರು ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿದ್ದವರಿಗೆ ನೆರವು ನೀಡಿದರು.

`ಸೋಮು ನಾಯ್ಕ ಅವರು ಹಿಂದೂ ಕಾರ್ಯಕರ್ತರಾಗಿ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಗೋವುಗಳ ರಕ್ಷಣೆ, ಜನಸಾಮಾನ್ಯರ ನೋವಿಗೆ ಸ್ಪಂದನೆ ನೀಡುವಲ್ಲಿ ಅವರು ಸದಾ ಮುಂದಿದ್ದಾರೆ’ ಎಂದು ಈ ವೇಳೆ ಷಣ್ಮುಖ ನಾಯ್ಕ ಹೇಳಿದರು. `ರವೀಂದ್ರನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದಾಗ ಅದನ್ನು ಬಗೆಹರಿಸುವಲ್ಲಿ ಪ ಪಂ ಸದಸ್ಯರ ಕೊಡುಗೆ ಅಪಾರ’ ಎಂದು ಗಿರೀಶ್ ಬೋವಿ, ಸಿದ್ದು ಯಾಮಕರ ಹಾಗೂ ಗಣೇಶ್ ಭೋವಿ ಅನಿಸಿಕೆ ಹಂಚಿಕೊAಡರು.

`ಜನರ ಸಮಸ್ಯೆಗೆ ಸ್ಪಂದಿಸುವ ಸೋಮೇಶ್ವರ ನಾಯ್ಕ ಅವರಿಗೆ ಹಿರಿಯರೆಲ್ಲರೂ ಸೇರಿ ಆಶೀರ್ವದಿಸಿ’ ಎಂದು ವೃದ್ಧಾಶ್ರಮದಲ್ಲಿದ್ದವರನ್ನು ಕೇಳಿಕೊಂಡರು. ಸಾಗರ್ ನಾಯ್ಕ, ಅಖಿಲ್ ನಾಯ್ಕ, ಚಂದ್ರು ಗೌಂಡರ್ ಸೇರಿ ಅಲ್ಲಿದ್ದವರಿಗೆಲ್ಲ ಸಿಹಿ ತಿಂಡಿ ವಿತರಿಸಿದರು. ಪ್ರಮುಖರಾದ ಬಿಟಪ್ಪ, ಸಾಜು ಜೋರೇ, ದೇವೇಂದ್ರ, ದಿಲೀಪ್, ನಾಗರಾಜ್ ಹಾಗೂ ಇರ್ಫಾನ್ ಇದ್ದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page