6

ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!

ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ ಪತ್ತೆಯಾಗಿದೆ. ಕಚೇರಿಯಲ್ಲಿ ಮಂಚ-ಹಾಸಿಗೆಯನ್ನಿರಿಸಿದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಅವರು ಸರಿಯಾಗಿ ಉತ್ತರಿಸಿದ ಕಾರಣ ಅವರ ಅಮಾನತಿಗೆ ಸಚಿವ ಎಚ್ ಕೆ ಪಾಟೀಲ ಸೂಚಿಸಿದ್ದಾರೆ!

ಕಾರವಾರದ ಆರ್ ಟಿ ಓ ಕಚೇರಿ ಅಂಚಿನ ಪ್ರದೇಶದಲ್ಲಿ ಹಿಂದಿನಿAದಲೂ ಪ್ರವಾಸೋದ್ಯಮ ಇಲಾಖೆಯ ಕಚೇರಿಯಿದೆ. ಆ ಕಚೇರಿಯ 500ಮೀ ದೂರದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ ಬಾಡಿಗೆ ಮನೆಯನ್ನು ಸಹ ಹೊಂದಿದ್ದಾರೆ. ಅದಾಗಿಯೂ ಕಚೇರಿಯ ಪಕ್ಕದ ಕೋಣೆಯಲ್ಲಿ ಅವರು ಹಾಸಿಗೆ-ದಿಂಬುಗಳನ್ನಿರಿಸಿಕೊoಡ ಆರೋಪ ಎದುರಿಸುತ್ತಿದ್ದಾರೆ. ಈ ವಿಷಯ ಅಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಮುಜುಗರಕ್ಕೂ ಕಾರಣವಾಗಿದೆ. ಜಯಂತ ಅವರು ಬೆಂಗಳೂರಿಗೆ ತರಬೇತಿಗೆ ತೆರಳಿದ ವೇಳೆ ಉಪವಿಭಾಗಾಧಿಕಾರಿ ಕನಿಷ್ಕ ಅವರು ಸರ್ಕಾರಿ ಕಚೇರಿಯಲ್ಲಿ ಮಂಚ-ಹಾಸಿಗೆ ಇರುವುದನ್ನು ಪತ್ತೆ ಮಾಡಿದ್ದಾರೆ!

`ಜೊಯಿಡಾದ ರಾಮನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಹುಬ್ಬಳ್ಳಿಯ ಸಾಯಿ ಕನ್ಸಕ್ಷನ್ ಅವರಿಗೆ 25 ವರ್ಷದ ಅವಧಿಗೆ ಜಾಗವನ್ನು ಲೀಸ್ ನೀಡಿತ್ತು. ನಿಯಮ ಉಲ್ಲಂಘನೆ ಕಾರಣ 2018ರಲ್ಲಿ ಸಾಯಿ ಕನ್ಸಕ್ಷನ್ ಮೇಲೆ ದಾಳಿ ನಡೆಸಲಾಗಿದ್ದು, ಆ ವೇಳೆ ಅಲ್ಲಿದ್ದ ಮಂಚವನ್ನು ವಶಕ್ಕೆ ಪಡೆದು ಪ್ರವಾಸೋದ್ಯಮ ಕಚೇರಿಯಲ್ಲಿರಿಸಲಾಗಿದೆ’ ಎಂದು ಜಯಂತ್ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ, ಆ ದಿನ ಒಟ್ಟು 10 ಮಂಚಗಳನ್ನು ವಶಕ್ಕೆ ಪಡೆದ ಬಗ್ಗೆ ದಾಖಲೆಗಳಲ್ಲಿ ನಮೂದಾಗಿದ್ದು, ಎಲ್ಲವನ್ನು ಕ್ರಮಬದ್ಧವಾಗಿರಿಸಿ ಸೀಲ್ ಮಾಡಿದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಸೀಲ್ ಆದ ಉಳಿದ ಮಂಚ, ಹಾಸಿಗೆ, ಸಿಸಿ ಕ್ಯಾಮರಾ, ಫ್ಯಾನು, ಟೇಬಲು, ಟಿವಿ, ಬಕೇಟು, ಕಂಪ್ಯುಟರ್, ಪ್ರಿಡ್ಜ್ ಸೇರಿ ನೂರಾರು ಸಾಮಗ್ರಿಗಳು ಎಲ್ಲಿ ಹೋದವು? ಎಂಬುದು ಯಾರಿಗೂ ಗೊತ್ತಾಗಿಲ್ಲ.

ರಾಮನಗರದಲ್ಲಿ ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನು ಸೀಲ್ ಮಾಡಿರುವ ಬಗ್ಗೆ ಪಂಚನಾಮೆಯಲ್ಲಿ ಬರೆಯಲಾಗಿದೆ. ಆದರೆ, ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಕಾಣಿಸಿದ ಮಂಚ ಸೀಲ್ ಮಾಡಿದ ಸ್ಥಿತಿಯಲ್ಲಿರಲಿಲ್ಲ. ಅದು ಬಳಕೆ ಮಾಡುತ್ತಿರುವ ರೀತಿ ಗೋಚರವಾಗಿರುವುದರಿಂದ ಇನ್ನಷ್ಟು ಅನುಮಾನ ಹುಟ್ಟಿಕೊಂಡಿದೆ. ಇನ್ನೂ ಜಯಂತ್ ಅವರ ಮಾತೃ ಇಲಾಖೆ ಪ್ರವಾಸೋದ್ಯಮ ಅಲ್ಲ. ಅವರು ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾಗಿದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರಭಾರಿ ಅಧಿಕಾರಿಯಾಗಿದ್ದಾರೆ.

 

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page