6

ಬೈಕಿಗಿಂತಲೂ ದುಬಾರಿ ಈ ದಂಡ!

ಬಾಲಕನಿಗೆ ಬೈಕ್ ನೀಡಿದ ತಪ್ಪಿಗೆ ನ್ಯಾಯಾಲಯ ಆತನ ತಂದೆಗೆ 25 ಸಾವಿರ ರೂ ದಂಡ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪೊಲೀಸರು ನಿರಂತರವಾಗಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಪಿಎಸ್‌ಐ ವಿನೋದ ಎಸ್ ಕೆ ಸಿಬ್ಬಂದಿ ಜೊತೆ ಬೈಕಿಗೆ ಅಡ್ಡಲಾಗಿ ಕೈ ಮಾಡಿದಾಗ ಕಾಲೇಜು ವಿದ್ಯಾರ್ಥಿಯೊಬ್ಬ ಸಿಕ್ಕಿ ಬಿದ್ದಿದ್ದ. ಆತನಿಗೆ ಇನ್ನೂ ಸರಿಯಾಗಿ ಮೀಸೆ ಮೂಡಿರಲಿಲ್ಲ. ಬೈಕ್ ಓಡಿಸಲು ಪರವಾನಿಗೆಯೂ ಇರಲಿಲ್ಲ. ಪರವಾನಿಗೆ ಪಡೆಯಲು 18ರ ವಯಸ್ಸು ಆಗಿರಲಿಲ್ಲ.

ಹೀಗಾಗಿ ಆ ಬೈಕಿನ ಜೊತೆ ಬಾಲಕನನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಆತನ ಪಾಲಕರಿಗೆ ಫೋನ್ ಮಾಡಿ ಕರೆಯಿಸಿದರು. ಬಾಲಕನಿಗೆ ಬೈಕ್ ಕೊಡದಂತೆ ಬುದ್ದಿ ಮಾತು ಹೇಳಿದರು. ಅದಾದ ನಂತರ ಮಾಡಿದ ತಪ್ಪಿಗೆ ಪಶ್ಚಾತಾಪವಾಗಿ ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿದರು. ಅಪ್ರಾಪ್ತರ ಬೈಕ್ ಓಡಿಸುವಿಕೆಯಿಂದ ಹೆಚ್ಚಾಗುತ್ತಿರುವ ಅಪಘಾತದ ಬಗ್ಗೆ ವರದಿಯೊಂದಿಗೆ ಪೊಲೀಸರು ದೋಷಾರೋಪಣ ಪಟ್ಟಿಯನ್ನು ಹಳಿಯಾಳ ನ್ಯಾಯಾಯಕ್ಕೆ ಸಲ್ಲಿಸಿದರು.

ನ್ಯಾಯಾಧೀಶರ ಮುಂದೆ `ತಮ್ಮಿಂದ ತಪ್ಪಾಗಿದೆ’ ಎಂದು ಬಾಲಕನ ತಂದೆ ಮಹಮದ್‌ಸಾಬ್ ಮುನಿಯಾರ್ ಒಪ್ಪಿಕೊಂಡರು. ಅದಾಗಿಯೂ ನ್ಯಾಯಾಲಯ 25 ಸಾವಿರ ರೂ ದಂಡ ಪಾವತಿಸುವಂತೆ ಸೂಚಿಸಿತು. ಮಹಮದ್‌ಸಾಬ್ ದಂಡ ಪಾವತಿಸಿ ಮನೆಗೆ ಮರಳಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page