6

ಕೂಲಿ ಕಾರ್ಮಿಕರಿಗೆ ಜೂಜಾಟದ ವ್ಯಾಮೋಹ!

ಸಾರ್ವಜನಿಕ ರಸ್ತೆ ಅಂಚಿನ ಪ್ರದೇಶದಲ್ಲಿ ರಾಜಾರೋಷವಾಗಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಗೋಕರ್ಣ ಪೊಲೀಸರು ದಾಳಿ ಮಾಡಿದ್ದಾರೆ. ಜೂಜಾಟ ಕಾನೂನುಬಾಹಿರ ಎಂದು ಹೇಳಿದರೂ ಕೇಳದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಕುಮಟಾ ಹಿರೆಗುತ್ತಿ ದೇವರಬೋಳೆಯ ರಮಾಕಾಂತ ಪಡ್ತಿ, ಹಿರೆಗುತ್ತಿಯ ರಾಘವೇಂದ್ರ ಹರಿಕಂತ್ರ, ಮಂಜುನಾಥ ಪಡ್ತಿ, ರಾಘವೇಂದ್ರ ಗಾಂವಕಾರ, ಉದಯ ಪಡ್ತಿ ಹಾಗೂ ಕುಮಟಾ ಮದ್ಯಹರಿಜನಕೇರಿಯ ರಾಘವೇಂದ್ರ ಹಳ್ಳರ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಫೆ 21ರಂದು ಅವರೆಲ್ಲರೂ ಹಿರೆಗುತ್ತಿಯ ಸೋನಾರಕೇರಿ ರಸ್ತೆ ಅಂಚಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದರು.

ಹಳದಿ ಬಣ್ಣದ ಮೂರು ಟವೆಲ್ ಹಾಸಿ ಅದರ ಮೇಲೆ ಇಸ್ಪಿಟ್ ಎಲೆಗಳನ್ನು ಹರಡಿಕೊಂಡಿದ್ದಾಗ ಗೋಕರ್ಣ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ್ ಭಾಷಾ ದಾಳಿ ಮಾಡಿದರು. 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 9120ರೂ ಹಣವನ್ನು ಅವರು ವಶಕ್ಕೆ ಪಡೆದರು. ಪ್ರತಿಯೊಬ್ಬರ ಹೆಸರನ್ನು ಪಡೆದು ಪ್ರಕರಣ ದಾಖಲಿಸಿದರು. ಸಿಕ್ಕಬಿದ್ದ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page