6

ದನ ಬೆದರಿಸಲು ಹೋದವರ ಬೈಕ್ ನಾಪತ್ತೆ!

ಶಿರಸಿಯ ಬನವಾಸಿ ಹಾಗೂ ಮಳಲಗಾವಿನಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆಗೆ ಬಂದವರ ಬೈಕ್ ಕಳ್ಳತನವಾಗಿದೆ. ಬೈಕ್ ಕಳೆದುಕೊಂಡು ಮನೆಗೆ ಹೋಗಲು ತೊಂದರೆ ಅನುಭವಿಸಿದ ಇಬ್ಬರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ದಾಸನಕೊಪ್ಪದ ಲಪಗುಡ್ಡೆಯ ಸಂತೋಷ ದಡ್ಡಿಕೊಪ್ಪ ಹಾಗೂ ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಅವರು ದನ ಬೆದರಿಸುವ ಸ್ಪರ್ಧೆಗೆ ಹೋಗಿ ಬೈಕ್ ಕಳೆದುಕೊಂಡಿದ್ದಾರೆ. ಫೆ 23ರಂದು ದನಗನಹಳ್ಳಿಯಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆ ನೋಡಲು ಸಂತೋಷ ದಡ್ಡಿಕೊಪ್ಪ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವುದಕ್ಕಾಗಿ ಅವರು ಅಲ್ಲಿಂದ ಹೊರ ಬಂದರು. ಆದರೆ, ಅವರು ನಿಲ್ಲಿಸಿದ ಜಾಗದಲ್ಲಿ ಬೈಕ್ ಇರಲಿಲ್ಲ.

ಅಲ್ಲಿ-ಇಲ್ಲಿ ಹುಡುಕಾಡಿದರೂ ಅವರ ಬೈಕ್ ಸಿಗಲಿಲ್ಲ. ಹೀಗಾಗಿ ಅವರು ಆ ದಿನ ಮನೆಗೆ ಹೋಗಲು ಸಮಸ್ಯೆ ಅನುಭವಿಸಿದರು. ಕೊನೆಗೆ ಅವರಿವರ ಕೈ-ಕಾಲು ಹಿಡಿದು ಬೇರೆ ವಾಹನದ ಮೂಲಕ ಮನೆ ಸೇರಿದರು. ಅದರಂತೆ, ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಸಹ ಫೆ 26ರಂದು ಮಳಲಗಾವ್ ಗ್ರಾಮದಲ್ಲಿ ನಡೆದ ದನ ಬೆದರಿಸುವ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಅವರು ಅಲ್ಲಿಯೇ ಇದ್ದರು. ಕೊನೆಗೆ ಅಲ್ಲಿಂದ ಹೊರ ಬಂದು ನೋಡಿದಾಗ ಬೈಕ್ ಕಾಣಲಿಲ್ಲ.

ಹೀಗಾಗಿ ಹನುಮಂತ ಕಡಗೋಡ ಅವರು ಮುಂಡಗೋಡಿಗೆ ಹೋಗಲು ಸಮಸ್ಯೆ ಅನುಭವಿಸಿದರು. ಜೊತೆಗೆ ತಮ್ಮ ಬೈಕ್ ಕಾಣೆಯಾದ ಬಗ್ಗೆಯೂ ತಲೆಬಿಸಿ ಮಾಡಿಕೊಂಡರು. ಬೈಕ್ ಹುಡುಕಾಟ ನಡೆಸಿದರೂ ಸಿಗದ ಕಾರಣ ಅವರು ಪೊಲೀಸರ ಮೊರೆ ಹೋದರು. ಸದ್ಯ ಈ ಎರಡು ಪ್ರಕರಣ ದಾಖಲಿಸಿಕೊಂಡಿರುವ ಬನವಾಸಿ ಠಾಣೆಯ ಪೊಲೀಸರು ಬೈಕ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page