6

ಬನವಾಸಿ: ದೇವಿ ಜಾತ್ರೆಗೆ ಸಕಲ ಸಿದ್ಧತೆ

ಶಿರಸಿ ತಾಲೂಕಿನ ಬನವಾಸಿ ಸೀಮಾ ದೇವತೆಯಾದ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾ 4ರಿಂದ 12ರವರೆಗೆ ನಡೆಯಲಿದೆ. ಒಂದೇ ಮಂದಿರದಲ್ಲಿನ ಒಂದೇ ಪೀಠದಲ್ಲಿ ಮಾತೆ ಹಕ್ಕಲ ಮಾರಿಕಾಂಬೆ, ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ಹಿರೇಕೆರೂರಿನ ಶ್ರೀ ದುರ್ಗಾದೇವಿಯರು ಆಸೀನರಾಗಿರುವುದು ಈ ದೇಗುಲದ ವಿಶೇಷ.

300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದಲ್ಲಿ 1972ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದೆ. ಈ ವರ್ಷ ಫೆ 28ರಂದು ಅಂಕೆ ಹಾಕುವುದು, ಮಾ 4ರಂದು ಉಡಿ ತುಂಬುವುದು, ರಾತ್ರಿ ದೇವಿಗೆ ದೃಷ್ಟಿ ಇಡುವುದು, ಮಾ 5ರಂದು ಮುಂಜಾನೆ 6ಕ್ಕೆ ಮಾರಿಕಾಂಬಾ ದೇವಿಯ ಮೆರವಣಿಗೆ ನಡೆಯಲಿದೆ. ವಿಶೇಷ ಕಲಾತಂಡದೊAದಿಗೆ ಬನವಾಸಿ ಪಟ್ಟಣದಲ್ಲಿ ಮೆರವಣಿಗೆ ಸಂಚರಿಸಲಿದೆ.

ಅದೇ ದಿನ ಬೆಳಗ್ಗೆ 11ಗಂಟೆಗೆ ದೇವಿಯ ಪೀಠಾರೋಹಣ ನಡೆಯಲಿದೆ. ಮಾ 6ರಿಂದ ಹರಕೆ, ತುಲಾಭಾರ, ಪೂಜಾ ವಿನಿಯೋಗಾದಿಗಳು, ಕೀರ್ತನಾದಿ ಸೇವಾ ಕಾರ್ಯಕ್ರಮ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಲತಾ ಭಟ್ಟ ಹೆಗ್ಗರ್ಸಿಮನೆ ಸುಗಮ ಸಂಗೀತ, ಸೊರಬ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ, ರವಿ ಮೂರೂರು ತಂಡದಿoದ ರಸಮಂಜರಿ, ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇನ್ನೂ ಶಿಥಿಲಗೊಂಡಿದ್ದ ದೇವಸ್ಥಾನವನ್ನು ಭಕ್ತರ ಸಹಕಾರದಲ್ಲಿ ನೂತನ ದೇವಸ್ಥಾನ ನಿರ್ಮಿಸಲಾಗುತ್ತಿದೆ. 20 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಈ ಕೆಲಸ ನಡೆಯುತ್ತಿದ್ದು, ಅಂತಿಮ ಹಂತದ ಕೆಲಸ ಮಾತ್ರ ಬಾಕಿಯಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page