6

ಪತ್ನಿ ವಿಷಯದಲ್ಲಿ ಬೇಸರ: ಕಳೆನಾಶಕ ಸೇವಿಸಿ ಪತಿ ಪ್ರಾಣ ತ್ಯಾಗ!

ಸಿದ್ದಾಪುರದ ತುಕಾರಾಮ ಗೊಂಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದ ಕಾರಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ದೂರವಾದ ಬೇಸರದಿಂದ ತುಕಾರಾಮ ಗೊಂಡ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿದ್ದಾಪುರದ ನೀಡಗೋಡದ ಮಂಡ್ಲಿಕೊಪ್ಪದಲ್ಲಿ ತುಕಾರಾಮ ಗೊಂಡ (34) ವಾಸವಾಗಿದ್ದರು. ರೈತರಾಗಿದ್ದ ಅವರು ಸರಾಯಿ ಚಟಕ್ಕೆ ಅಂಟಿಕೊAಡಿದ್ದರು. ಅದು ವಿಕೋಪಕ್ಕೆ ತೆರಳಿದ ಪರಿಣಾಮ ಸಂಸಾರದಲ್ಲಿ ಜಗಳ ಸಾಮಾನ್ಯವಾಗಿತ್ತು.

ತುಕಾರಾಮ ಗೊಂಡ ಅವರ ವರ್ತನೆಯಿಂದ ಬೇಸತ್ತ ಅವರ ಪತ್ನಿ ತವರು ಮನೆಗೆ ಹೋಗಿದ್ದರು. ವರ್ಷ ಕಳೆದರೂ ಅವರು ಮರಳಿ ಬಂದಿರಲಿಲ್ಲ. ಮನವೊಲೈಕೆ ಪ್ರಯತ್ನ ಸಹ ಫಲಿಸಿರಲಿಲ್ಲ. ಇದರಿಂದ ತುಕಾರಾಮ ಗೊಂಡ ಇನ್ನಷ್ಟು ಕುಗ್ಗಿದ್ದರು. ಅದೇ ನೋವಿನಲ್ಲಿ ಫೆ 28ರಂದು ಅವರು ಕಳೆನಾಶಕ ಸೇವಿಸಿದರು.

ಇದನ್ನು ನೋಡಿದ ಅವರ ತಂದೆ ಬೂತಾ ಗೊಂಡ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಮಾರ್ಚ 1ರಂದು ತುಕಾರಾಮ ಗೊಂಡ ಸಾವನಪ್ಪಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page