6

ಅಣ್ಣ ಮಾಡಿದ ಅವಾಂತರ: 10ನೇ ತರಗತಿ ಬಾಲಕಿಗೆ ಹೆಣ್ಣು ಮಗು!

ಹೊಟ್ಟೆನೋವು ಎಂದು ಯಲ್ಲಾಪುರ ಆಸ್ಪತ್ರೆಗೆ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಹೆಣ್ಣು ಮಗು ಹುಟ್ಟಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆಕೆಯ ಅಣ್ಣನಿಂದಲೇ ಗರ್ಭ ಧರಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಯಲ್ಲಾಪುರ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕೆಲ ತಿಂಗಳ ಹಿಂದೆ ಮುಂಡಗೋಡಿನ ಸಂಬoಧಿಕರ ಮನೆಗೆ ಹೋಗಿದ್ದರು. ಆ ವೇಳೆ, ಗಿರೀಶ (19) ಎಂಬಾತ ಆ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ವಿಷಯವನ್ನು ಹೊರಗಡೆ ಹೇಳಿದರೆ ಜೀವ ತೆಗೆಯುವುದಾಗಿಯೂ ಆತ ಬೆದರಿಸಿದ್ದ. ಹೀಗಾಗಿ ಆ ವಿದ್ಯಾರ್ಥಿನಿ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದರೂ ಅದನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಎರಡು ತಿಂಗಳ ಹಿಂದೆ ಆರೋಗ್ಯ ಇಲಾಖೆಯವರು ಶಾಲಾ-ಕಾಲೇಜು ಭೇಟಿ ನಡೆಸಿದಾಗಲೂ ವಿದ್ಯಾರ್ಥಿನಿ ಸ್ಪಷ್ಟ ಮಾಹಿತಿ ಕೊಟ್ಟಿರಲಿಲ್ಲ. ಬಡಕಲು ಶರೀರದ ವಿದ್ಯಾರ್ಥಿನಿ ಕೊಂಚ ದಪ್ಪವಾಗಿದ್ದು ಬಿಟ್ಟರೆ ಆಕೆ ಗರ್ಭಿಣಿ ಎನ್ನುವುದಕ್ಕೆ ಬೇರೆ ಯಾವುದೇ ಮುನ್ಸೂಚನೆಯೂ ಸಿಕ್ಕಿರಲಿಲ್ಲ. ಮಾರ್ಚ 4ರಂದು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಬರೆದಿದ್ದು, ಮಾರ್ಚ 5ರಂದು ಹೊಟ್ಟೆನೋವಿನ ಕಾರಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.

ಈ ವೇಳೆ ಅವರಿಗೆ ಹೆಣ್ಣು ಮಗು ಜನಿಸಿದೆ. ವಿಚಾರಣೆ ನಡೆಸಿದಾಗ ಸಹೋದರ ಸಂಬoಧಿ ನಡೆಸಿದ ನೀಚ ಕೃತ್ಯ ಅರಿವಿಗೆ ಬಂದಿದೆ. ಮುಂಡಗೋಡ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ. ಇನ್ನೂ, ಅವಧಿಪೂರ್ವ ಮಗು ಜನನವಾಗಿದ್ದರಿಂದ ಮಗುವಿನ ಆರೋಗ್ಯವೂ ಸರಿಯಾಗಿಲ್ಲ. ಮಗು ಕೇವಲ 1.7 ಕೆಜಿ ತೂಕವಿದ್ದು, ತಾಯಿಯೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕಡಿಮೆ ತೂಕ, ಅನಾರೋಗ್ಯದ ಹಿನ್ನಲೆ ತಾಯಿ-ಮಗುವನ್ನು ಯಲ್ಲಾಪುರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    One thought on “ಅಣ್ಣ ಮಾಡಿದ ಅವಾಂತರ: 10ನೇ ತರಗತಿ ಬಾಲಕಿಗೆ ಹೆಣ್ಣು ಮಗು!”

    Comments are closed.

    You cannot copy content of this page