6

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

ಸಂಧಿವಾತ, ಚರ್ಮ ಕಾಯಿಲೆ, ಮಧುಮೇಹ, ಬೆನ್ನು ನೋವು, ಕಫ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುಷ್ ಇಲಾಖೆ ಭಾನುವಾರ ಉಚಿತ ಶಿಬಿರ ಆಯೋಜಿಸಿದೆ. ಮಾರ್ಚ 9ರಂದು ಕಾರವಾರ ನಗರಸಭೆ ಆವರಣದಲ್ಲಿ ಈ ದಿನ ಈ ಶಿಬಿರ ನಡೆಯಲಿದೆ.

ವಾತ, ಪಿತ್ತ, ಕಫ ಮತ್ತು ರಕ್ತದೋಷದ ಬಗ್ಗೆ ಅಧ್ಯಯನ ನಡೆಸಿರುವ ಡಾ ಮಲ್ಲಿಕಾರ್ಜುನ ಹಿರೇಮಠ್ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ರೋಗಕ್ಕೆ ತಕ್ಕ ಔಷಧಿಗಳನ್ನು ನೀಡುವುದರ ಜೊತೆ ರೋಗ ಬಾರದಂತೆ ತಡೆಯುವ ವಿಧಾನಗಳ ಬಗ್ಗೆಯೂ ಅವರು ಈ ದಿನ ಅರಿವು ಮೂಡಿಸಲಿದ್ದಾರೆ.

`ಯುನಾನಿ ಚಿಕಿತ್ಸೆ ಎಂಬುದು ಪ್ರಾಚೀನ ಗ್ರೀಕ್ ವೈದ್ಯಕೀಯ ಪದ್ಧತಿ. ಗಿಡ ಮೂಲಿಕೆ, ಪ್ರಾಣಿಜನ್ಯ, ಖನಿಜಾಂಶಗಳಿoದ ಮಾಡಿದ ಔಷಧಿಗಳ ಮೂಲಕ ರೋಗ ಗುಣಪಡಿಸಲಾಗುತ್ತದೆ. ಶುದ್ಧವಾದ ಊಟ, ಸುಖವಾದ ನಿದ್ದೆ, ಆರಾಮದಾಯಿಕ ವಿರಾಮದ ಮೂಲಕ ಸಹ ಅನೇಕ ರೋಗಗಳನ್ನು ವಾಸಿ ಮಾಡಲು ಸಾಧ್ಯ. ಕಫಿಂಗ್ ತೆರಫಿ ಇಲ್ಲಿನ ಪ್ರಮುಖ ವಿಧಾನಗಳಲ್ಲಿ ಒಂದಾಗಿದೆ. ಬೆನ್ನು ನೋವು, ರಕ್ತದೊತ್ತಡ ಸೇರಿ ಅನೇಕ ರೋಗಗಳನ್ನು ಯುನಾನಿ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯ’ ಎಂಬುದು ವೈದ್ಯರ ಮಾತು.

ಹಕೀಮ್ ಅಜ್ಮಲ್ ಖಾನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ 9ನೇ ರಾಷ್ಟ್ರೀಯ ಯುನಾನಿ ದಿನಾಚರಣೆ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಲಯನ್ಸ ಕ್ಲಬ್ಬಿನವರು ಸಹಯೋಗ ನೀಡಿದ್ದಾರೆ. ಭಾನುವಾರ ಬೆಳಗ್ಗೆ 10ಗಂಟೆಯಿoದ ಮಧ್ಯಾಹ್ನ 2ಗಂಟೆಯವರೆಗೂ ಈ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಹೆಸರು ನೋಂದಾಯಿಸಲು ಇಲ್ಲಿ ಫೋನ್ ಮಾಡಿ: 9481885134 ಅಥವಾ 9448142024

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page