6

ನಗೆ ಗ್ರಾಮಸ್ಥರ ಮೊಗದಲ್ಲಿ ನಗು: ಕೈಗಾ ಅಧಿಕಾರಿಗಳಿಗೆ ಪ್ರೀತಿಯ ಸನ್ಮಾನ!

ಕೈಗಾ ಅಣು ವಿದ್ಯುತ್ ಘಟಕದಿಂದ ಕಾರವಾರದ ನಗೆ ಗ್ರಾಮಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕಾರಣ ಗ್ರಾಮದ ಜನ ಅಣು ವಿದ್ಯುತ್ ಘಟಕದ ಅಧಿಕಾರಿಗಳನ್ನು ಸನ್ಮಾನಿಸಿದ್ದಾರೆ.

ಕೈಗಾ ಯೋಜನೆಯ ಸ್ಥಾನಿಕ ನಿರ್ದೇಶಕ ಬಿ ವಿನೋದಕುಮಾರ, ಸ್ಟೇಶನ್ ಡೈರೆಕ್ಟರ್ ಎಸ್ ಕೆ ಓಜಾ, ಸಿಎಸ್‌ಆರ್ ಯೋಜನೆಯ ಅಧ್ಯಕ್ಷ ಎಸ್‌ಜೆಟಿ ಸ್ವಾಮಿ, ಸ್ಟೇಶನ್ ಡೈರೆಕ್ಟರ್ ಜೆ ಎಲ್ ಸಿಂಗ್, ಕೈಗಾ ನೌಕರರ ಯುನಿಯನ್ ಅಧ್ಯಕ್ಷ ಜಗದೀಶ ಗುನಗ, ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ರಾಜೇಶ ಕುಮಾರ ಪೈ, ಸಿಎಸ್‌ಆರ್ ಯೋಜನೆಯ ಹಿರಿಯ ಇಂಜಿನೀಯರ್ ಸಾಯಿನಾಥ ನಾಯ್ಕ ಅವರನ್ನು ಊರಿನವರು ಗೌರವಿಸಿದರು.

ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಲೇಖಾ ಗೌಡ, ಅಭಿವೃದ್ಧಿ ಅಧಿಕಾರಿ ರಘುನಂದನ ಮಡಿವಾಳ, ಶಾಲಾ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷೆ ಲಲಿತಾ ದಿನೇಶ ಗೌಡ, ಉಪಾಧ್ಯಕ್ಷೆ ಲಕ್ಷಿ ಗೆರಗ್ಯಾ ಗೌಡ, ಗ್ರಾಮದ ಮೊಕ್ತೇಸರರಾದ ಕೇಶವ ಗಾಂವಕರ, ಗುನಗರಾದ ಏಕೇಶ ಗೌಡ, ತಿಮ್ಮ ಗೌಡ, ಊರ ಪ್ರಮುಖರಾದ ದಿನೇಶ ಗೌಡ, ಮಹೇಶ ಗೌಡ, ಶಿವಾ ಗೌಡ, ಪ್ರಕಾಶ ಗಾಂವಕರ, ಶಾಲಾ ಮುಖ್ಯ ಶಿಕ್ಷರಾದ ಅಖ್ತರ ಜೆ ಸೈಯದ್, ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ, ಕೈಗಾ ಯೋಜನಾ ಶಿಕ್ಷಕಿ ಪ್ರಿಯಾ ಲಾಂಜೇಕರ, ಗ್ರಾಮದ ಪುರೋಹಿತರಾದ ಪ್ರಶಾಂತ ಭಟ್, ದೀಪಾ ಭಟ್ ಇನ್ನಿತರರು ಈ ಸನ್ಮಾನಕ್ಕೆ ಸಾಕ್ಷಿಯಾದರು.

ಸನ್ಮಾನಿತರಿಗೆ ಮುಖ್ಯ ಶಿಕ್ಷಕ ಅಖ್ತರ ಜೆ ಸೈಯದ ಅವರು ರಂಜಾನ್ ಹಬ್ಬದ ಅಂಗವಾಗಿ ಹಣ್ಣುಗಳನ್ನು ನೀಡಿದರು. ಸನ್ಮಾನ ಸ್ವೀಕರಿಸಿದ ಅಧಿಕಾರಿಗಳು ಊರಿನವರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ದಿನೇಶ ಗೌಡ, ಮಹೇಶ ಗೌಡ ಹಾಗೂ ಕೇಶವ ಗಾಂವಕಾರ ಕಾರ್ಯಕ್ರಮ ಸಂಘಟಿಸಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page