6

ಸ್ಕೂಟಿಯಲ್ಲಿದ್ದ ಕಾಸು ಕಳ್ಳರ ಪಾಲು!

ಕುಮಟಾದ ಹುಲಿದೇವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದ ಸ್ಕೂಟಿಯಲ್ಲಿದ್ದ ಹಣ ಹಾಗೂ ಮೊಬೈಲ್’ನ್ನು ಕಳ್ಳರು ದೋಚಿದ್ದಾರೆ. 62 ವರ್ಷದ ಶಶಿಕಾಂತ ನಾಯಕ 2.52 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ.

ಕುಮಟಾ ಹೆರವಟ್ಟಾದ ಶಶಿಕಾಂತ ನಾಯಕ ಅವರು ಮಂಗಳವಾರ ರಾತ್ರಿ 10 ಗಂಟೆಗೆ ಹಳೆ ತಹಶೀಲ್ದಾರ್ ಕಚೇರಿ ಎದುರು ಸ್ಕೂಟಿ ನಿಲ್ಲಿಸಿದ್ದರು. ವ್ಯಾಪಾರ ಮಾಡಿಕೊಂಡಿರುವ ಅವರು ಸ್ಕೂಟಿಯಲ್ಲಿ 2.52 ಲಕ್ಷ ರೂ ಹಣವಿರಿಸಿದ್ದರು. ಮರಳಿ ಬಂದು ನೋಡಿದಾಗ ಅವರ ಹಣ ಹಾಗೂ ಮೊಬೈಲ್ ಕಾಣೆಯಾಗಿತ್ತು.

ಸ್ಕೂಟಿಯಲ್ಲಿದ್ದ ಎರಡು ಬ್ಯಾಗನ್ನು ಕಳ್ಳರು ಅಪಹರಿಸಿರುವುದ ಅವರ ಗಮನಕ್ಕೆ ಬಂದಿತು. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ಅವರು ದೂರು ಸಲ್ಲಿಸಿದರು. ಪಿಎಸ್‌ಐ ಮಯೂರ್ ಪಟ್ಟಣಶೆಟ್ಟಿ ಇದೀಗ ಆ ಬ್ಯಾಗ್ ಹುಡುಕಾಟ ನಡೆಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page