6

ಯುವಕರ ನಡುವೆ ಮಾರಾಮಾರಿ!

ಹಳಿಯಾಳದ ಮುರ್ಕವಾಡ ಗ್ರಾಮದ ನವನಗರ ಪ್ರದೇಶದ ಮಾರಿಕಾಂಬಾ ಹೊಟೇಲ್ ಬಳಿ ಮಾರ್ಚ 23ರ ರಾತ್ರಿ ಮಾರಾಮಾರಿ ನಡೆದಿದೆ. ಚಾಕು-ಚೂರಿ ಹಿಡಿದು ಎರಡು ಗುಂಪಿನ ಜನ ಹೊಡೆದಾಟ ನಡೆಸಿದ್ದಾರೆ.

ಸಚಿನ ಮಾರುತಿ ಕೊರವರ, ವಿಶಾಲ್ ನಿಂಗಪ್ಪ ಹಾರುಗೊಪ್ಪ ಹಾಗೂ ಇನ್ನೂ ಇಬ್ಬರಿಗೆ ಈ ಹೊಡೆದಾಟದಲ್ಲಿ ಗಾಯವಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರು ಹಲ್ಲೆ ನಡೆಸಿ ಪರಾರಿಯಾಗಿದ್ದ ಏಳು ಜನರನ್ನು ಹಿಡಿದಿದ್ದಾರೆ. ಹೊಡೆದಾಟಕ್ಕೆ ಬಳಸಿದ ಚಾಕು, ರಾಡುಗಳ ಜೊತೆ ನಾಲ್ಕು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಹೊಡೆದಾಟ ಪ್ರಕರಣದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸೆ ಮುಂದುವರೆದಿದೆ. ದಾಂಡೇಲಿ ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶಿವಾನಂದ ಮದರಖಂಡಿ ಹಾಗೂ ವೃತ್ತ ನಿರೀಕ್ಷಕರಾದ ಜಯಪಾಲ್ ಪಾಟೀಲ್ ನೇತ್ರತ್ವದಲ್ಲಿ ಆರೋಪಿಗಳ ಬಂಧನ ನಡೆದಿದೆ. ಪಿಎಸ್‌ಐ ವಿನೋದ ಎಸ್ ಕೆ, ಕೃಷ್ಣ ಗೌಡ ಅರಕೇರಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page