6

ಅಪಘಾತ: ಲುಕ್‌ಮ್ಯಾನ್’ಗೆ ಈ ದಿನ ಬ್ಯಾಡ್ ಲಕ್!

ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಲುಕ್‌ಮನ್ ಗೌಸ್ ಸಾವನಪ್ಪಿದ್ದಾರೆ. ಗಾಯಗೊಂಡ ಅವರನ್ನು ಬದುಕಿಸುವುದಕ್ಕಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ಸಿದ್ದಾಪುರದ ಹೇರೂರು ಅಂಡಲೇಬೈಲಿನ ಲುಕ್‌ಮನ್ ಗೌಸ್ (45) ಚಾಲಕರಾಗಿದ್ದರು. ಮಾರ್ಚ 24ರಂದು ಅವರು ವೇಗವಾಗಿ ಇಕೋ ವಾಹನ ಓಡಿಸಿಕೊಂಡು ಹೊರಟಿದ್ದರು. ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚರಿಸಿದ ಅವರು ಕತಗಾಲಿನ ಕಪ್ಪೆಗುಳಿ ರಸ್ತೆ ತಿರುವಿನಲ್ಲಿ ಸಹ ವಾಹನದ ವೇಗ ತಗ್ಗಿಸಲಿಲ್ಲ.

ಪರಿಣಾಮ ಲುಕ್‌ಮನ್ ಎದುರಿನಿಂದ ಬರುತ್ತಿದ್ದ ಇನೋವಾ ಕಾರಿಗೆ ತಮ್ಮ ಇಕೋ ಕಾರನ್ನು ಗುದ್ದಿದರು. ಅಪಘಾತದ ರಭಸಕ್ಕೆ ಎರಡು ಕಾರುಗಳು ಜಖಂ ಆದವು. ಜೊತೆಗೆ ಇಕೋ ಕಾರಿನಲ್ಲಿದ್ದ ಲುಕ್‌ಮನ್ ಗೌಸ್ ಎರಡು ಕಾಲು ಮುರಿದುಕೊಂಡರು. ಇನ್ನಿತರ ಕಡೆಗಳಲ್ಲಿಯೂ ಗಾಯ ಮಾಡಿಕೊಂಡರು.

ಮೊದಲು ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಅದೇ ದಿನ ರಾತ್ರಿ ಅವರು ಸಾವನಪ್ಪಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page