6

ನೇಣಿಗೆ ಶರಣಾದ ಮೀಟರ್ ಮಂಜುನಾಥ!

ಹಳಿಯಾಳದ ಮಂಜುನಾಥ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ.

ಹಳಿಯಾಳದ ಸದಾಶಿವನಗರದಲ್ಲಿ ಮಂಜುನಾಥ ಗೌಡ (35) ವಾಸಿಸುತ್ತಿದ್ದರು. ಮನೆ ಮನೆಗೆ ತೆರಳಿ ವಿದ್ಯುತ್ ಮೀಟರ್ ಓದಿ ಬಿಲ್ ಕೊಡುವುದು ಅವರ ಕಾಯಕವಾಗಿತ್ತು. ಈಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಅದೇ ಬೇಸರದಲ್ಲಿರುತ್ತಿದ್ದರು.

ಆರೋಗ್ಯ ವಿಷಯವಾಗಿ ಸಾಕಷ್ಟು ತಲೆಕೆಡಿಸಿಕೊಂಡಿದ್ದ ಅವರು ವಿವಿಧ ಆಸ್ಪತ್ರೆಗೆ ತೆರಳಿದರೂ ಕ್ಷೇಮವಾಗಿರಲಿಲ್ಲ. ಹೀಗಾಗಿ ಮಾರ್ಚ 25ರ ಬೆಳಗ್ಗೆ 11 ಗಂಟೆ ವೇಳೆಗೆ ಬಚ್ಚಲು ಮನೆಗೆ ಹೋದ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾದರು.

ಅಲ್ಲಿದ್ದ ಮರದ ಎಳೆಗೆ ವೇಲು ಸಿಕ್ಕಿಸಿ ಅದನ್ನು ಕುಣಿಕೆಯನ್ನಾಗಿಸಿಕೊಂಡು ನೇಣು ಹಾಕಿಕೊಂಡರು. ದುಡಿಯುವ ಮಗನನ್ನು ಕಳೆದುಕೊಂಡ 64ರ ವೃದ್ಧೆ ಬಸವಣ್ಣನಮ್ಮ ಕಣ್ಣೀರು ಹಾಕುತ್ತ ಮಗನ ಸಾವಿನ ಬಗ್ಗೆ ವಿವರಣೆ ನೀಡಿದರು. ಪೊಲೀಸರು ಮಾಹಿತಿಪಡೆದು ಪ್ರಕರಣ ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page