6

ಜೀವನ ಯಾತ್ರೆ ಮುಗಿಸಿದ ಬಿಜೆಪಿ ಕಟ್ಟಾಳು

ಯಲ್ಲಾಪುರ: ತಳಮಟ್ಟದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಸಬಗೇರಿಯ ಗಣಪತಿ ಭಟ್ಟ ಜಡ್ಡಿ ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದ ಅವರು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದರು. `ಸಂಘಟನೆಯೇ ಶಕ್ತಿ’ ಎಂದು ನಂಬಿ ಅನೇಕ ವರ್ಷಗಳಿಂದ ಕಾರ್ತಿಕ ಉತ್ಸವದ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದರು. ಉತ್ತಮ ಕೃಷಿಕರಾಗಿ, ಪುರೋಹಿತರಾಗಿ ಹಲವರ ಮನ ಗೆದ್ದಿದ್ದರು. ಅಯೋಧ್ಯೆ ಹಾಗೂ ರಾಮಮಂದಿರದ ಬಗ್ಗೆ ಎಲ್ಲರಲ್ಲಿಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. 91 ವರ್ಷಗಳ ಕಾಲ ಸಾತ್ವಿಕ ಬದುಕು ನಡೆಸಿದ ಅವರು ಭಾನುವಾರ ಈ ಲೋಕವನ್ನು ತ್ಯಜಿಸಿದ್ದಾರೆ. `ಗಣಪತಿ ಅವರು ಅತ್ಯಂತ ಸರಳ ವ್ಯಕ್ತಿಯಾಗಿದ್ದು, ನಮಗೆಲ್ಲ ಪ್ರೇರಣೆಯಾಗಿದ್ದರು’ ಎಂದು ಸಿ ಡಿ ಭಟ್ಟ ಅವರು ಹೇಳಿದರು.

ಗಣಪತಿ ಭಟ್ಟ ಅವರ ನಿಧನದ ವಿಷಯ ತಿಳಿದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿಗರಾದ ಸೋಮೇಶ್ವರ ನಾಯ್ಕ, ವಿನೋದ ತಳ್ಳೆಕರ್, ರವಿ ದೇವಾಡಿಗ ಮೊದಲಾದವರು ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಗಣಪತಿ ಭಟ್ಟ ಜಡ್ಡಿ ಅವರ ನಿಧನಕ್ಕೆ ಅನೇಕರು ಸಂತಾಪ ಸಲ್ಲಿಸಿ, ಅವರ ಆಪ್ತರಿಗೆ ಸಾಂತ್ವಾನ ಹೇಳಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page