6

ಇನ್ಮುಂದೆ ಇಲ್ಲಿ ಪೆಟ್ರೋಲ್ ಸಿಗಲ್ಲ.. ಡಿಸೇಲ್ ಸಹ ಲಭ್ಯವಿಲ್ಲ!

ಅಂಕೋಲಾ-ಯಲ್ಲಾಪುರ ಗಡಿಭಾಗದ ಕೊಡ್ಲಗದ್ದೆ ಕಾಡಿನಲ್ಲಿ ಮಾರಾಟವಾಗುತ್ತಿದ್ದ ಪೆಟ್ರೋಲ್-ಡಿಸೇಲ್ ವ್ಯಾಪಾರಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಇಂಧನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಕೊಡ್ಲಗದ್ದೆ ಕ್ರಾಸಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮಾರಾಟ ನಡೆಯುತ್ತಿತ್ತು. ಮಾರುಕಟ್ಟೆ ಬೆಲೆಗಿಂತ 5ರಿಂದ 10ರೂ ಕಡಿಮೆ ಬೆಲೆಯಲ್ಲಿ ಇಲ್ಲಿ ಪೆಟ್ರೋಲ್ ಸಿಗುತ್ತಿತ್ತು. ಇಲ್ಲಿಂದ ಪೆಟ್ರೋಲ್ ಹಾಗೂ ಡಿಸೇಲ್ ಪಡೆದ ಅನೇಕರು ವಿವಿಧ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದರು.

ಒಂದು ಲೀಟರಿನಿಂದ ಹಿಡಿದು 30-35ಲೀಟರ್’ವರೆಗಿನ ಕ್ಯಾನುಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ನಡೆದಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ಗುಣಮಟ್ಟವೂ ಚನ್ನಾಗಿತ್ತು. ಇಲ್ಲಿ ಎಂದಿಗೂ ಕಲಬೆರೆಕೆ ಇಂದನ ನೀಡಿದ ದೂರುಗಳಿರಲಿಲ್ಲ. ಹೀಗಾಗಿ ಅನೇಕ ಐಷಾರಾಮಿ ವಾಹನದವರು ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಇಂಧನ ಮಾರಾಟಕ್ಕೆ ಅಗತ್ಯ ಪರವಾನಿಗೆಯನ್ನು ಮಾರಾಟಗಾರರು ಪಡೆದಿರಲಿಲ್ಲ. ಸ್ಪೋಟಕ ವಸ್ತುಗಳಾದ ಪೆಟ್ರೋಲ್ ಹಾಗೂ ಡಿಸೇಲ್’ನ್ನು ಸುರಕ್ಷಿತವಾಗಿರಿಸಿಕೊಂಡಿರಲಿಲ್ಲ.

ಈ ಹಿನ್ನಲೆ ಅಂಕೋಲಾದ ಪಿಎಸ್‌ಐ ಅಶೋಕ ಧರೆಪ್ಪನವರ್ ಕೊಡ್ಲಗದ್ದೆ ಕ್ರಾಸಿಗೆ ಬಂದರು. ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ, ಶ್ರೀಕಾಂತ ಕಟಬರ, ಸಲೀಂ ಮೊಕಾಶಿ, ಪುನೀತ ನಾಯ್ಕ ಅಲ್ಲಿನ ಕಾಡಿನಲ್ಲಿ ಹುಡುಕಾಟ ನಡೆಸಿದರು. ಆಗ, ಕೊಡ್ಲಗದ್ದೆಯ ಸುಧಾಕರ ನಾಯ್ಕ ಅವರು ಕಾಡಿನಲ್ಲಿ ಅಡಗಿಸಿಟ್ಟಿದ್ದ 20ಲೀಟರಿನ 5 ಕ್ಯಾನ್ ಡಿಸೇಲ್ ಕಾಣಿಸಿತು. ಇದರೊಂದಿಗೆ 30, 20 ಹಾಗೂ 10 ಲೀಟರಿನ ಒಂದಷ್ಟು ಕ್ಯಾನುಗಳಲ್ಲಿ ಪೆಟ್ರೋಲ್ ತುಂಬಿಕೊoಡಿರುವುದು ಅರಿವಿಗೆ ಬಂದಿತು. 99 ಲೀಟರ್ ಡಿಸೇಲ್ ಹಾಗೂ 407 ಲೀಟರ್ ಪೆಟ್ರೋಲನ್ನು ಪೊಲೀಸರು ಜಪ್ತು ಮಾಡಿದರು.

ಇದರೊಂದಿಗೆ ಒಂದೊoದು ಲೀಟರ್ ಬಾಟಲಿಯಲ್ಲಿದ್ದ ಇಂಧನವನ್ನು ಸಹ ವಶಕ್ಕೆಪಡೆದರು. ಖಾಲಿ ಕ್ಯಾನು, ಅಳತೆ ಮಾಪನ, ಪ್ಲಾಸ್ಟಿಕ್ ಲಾಳಕೆ, ಹಸಿರು ಬಣ್ಣದ ಪೈಪುಗಳು ಅಲ್ಲಿ ಪೊಲೀಸರ ಕಣ್ಣಿಗೆ ಬಿದ್ದವು. ಅದನ್ನು ಸಹ ಪೊಲೀಸರು ಠಾಣೆಗೆ ತಂದರು. ಯಾವುದೇ ಪರವಾನಿಗೆಪಡೆಯದೇ ಇಂಧನ ದಾಸ್ತಾನು ಮಾಡಿದಕ್ಕಾಗಿ ಕೊಡ್ಲಗದ್ದೆಯ ಸುಧಾಕರ ನಾಯ್ಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page