6

ಅಂಕೋಲಾ: ಮಿತಿ ಮೀರಿದ ಮಟ್ಕಾ!

ಅಂಕೋಲಾದಲ್ಲಿ ಮಟ್ಕಾ ಆಡಿಸುವವರನ್ನು ಪತ್ತೆ ಮಾಡಿದ ಪೊಲೀಸರು ಒಂದೇ ದಿನ ಹಲವು ಕಡೆ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದಾರೆ.

ಏಪ್ರಿಲ್ 23ರಂದು ಶಿರೂರಿನ ನಾಗಪ್ಪ ಗೌಡ ಅವರು ಗೂಡಂಗಡಿಯಲ್ಲಿ ಮಟ್ಕಾ ಆಡಿಸುವಾಗ ಪಿಎಸ್‌ಐ ಉದ್ದಪ್ಪ ದರಪ್ಪನವರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಶಿರೂರು ಬೀರ ದೇವಸ್ಥಾನದ ಹತ್ತಿರ ಅವರು ಮಟ್ಕಾ ಆಡಿಸುತ್ತಿದ್ದರು.

ಕೂಲಿ ಕೆಲಸ ಮಾಡಿಕೊಂಡಿದ್ದ ಅಂಕೋಲ ಬೆಳಂಬಾರದ ರಾಜು ಗೌಡ ಅವರು ಪೂಜಗೇರಿ ಸೇತುವೆ ಹತ್ತಿರ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಮೀನುಗಾರಿಕೆ ನಡೆಸುವ ಬೆಳಂಬಾರದ ಮಾರುತಿ ಖಾರ್ವಿ ಅವರು ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನ ಕಟ್ಟೆಯ ಬಳಿ ಮಟ್ಕಾ ಆಡಿಸುವಾಗ ಪಿಎಸ್‌ಐ ಸುನೀಲ ಹುಲ್ಲೊಳ್ಳಿ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ.

ವಂದಿಗೆ ಡಿಪೋ ರಸ್ತೆ ಬಳಿ ಕಿರಾಣಿ ಅಂಗಡಿ ನಡೆಸುವ ಉದಯ ನಾಯ್ಕ ಅವರು ಮಟ್ಕಾ ಆಡಿಸುತ್ತಿದ್ದಾಗ ಪಿಐ ಚಂದ್ರಶೇಖರ ಮಠಪತಿ ದಾಳಿ ಮಾಡಿದ್ದಾರೆ. ಅಂಬಾರಕೊಡ್ಲದ ಮಂಜುನಾಥ ಗೌಡ ಅವರು ಸಹ ತಮ್ಮ ಕಿರಾಣಿ ಅಂಗಡಿ ಬಳಿ ಮಟ್ಕಾ ಆಡಿಸುತ್ತಾಗ ಸಿಕ್ಕಿ ಬಿದ್ದಿದ್ದಾರೆ. ಈ ಎಲ್ಲರ ಬಳಿಯಿದ್ದ ಹಣ, ಮಟ್ಕಾ ಪರಿಕ್ಕರ ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page