6

ಜಾತಿ ಲೆಕ್ಕಾಚಾರ: ವೈಜ್ಞಾನಿಕ ಸಮೀಕ್ಷೆಯೇ ಕ್ರಾಂತಿಕಾರಿ‌ ಹೆಜ್ಜೆ!

ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ ೫ ಸೋಮವಾರದಿಂದ ರಾಜ್ಯಾದಂತ ಪ್ರಾರಂಭವಾಗಲಿದೆ. ‘ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸುವಿಯು ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಕಾಂತ್ರಿಕಾರಿಯ ಹೆಜ್ಜೆಯಾಗಲಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಸಮೀಕ್ಷೆಯ ಜಾಗೃತೆ ಅಂಗವಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಕೈಪೀಡಿ ಅವಲೋಕಿಸಿದ ಅವರು ತಮ್ಮ‌ ನಿಲುವು ಹೊರಹಾಕಿದರು. ‘ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಿಸ್ಸಿನ ಮೇರೆಗೆ ರಾಜ್ಯ ಸರ್ಕಾರದ ಮಾರ್ಚ ೨೭ರ ಸಚಿವ ಸಂಪುಟದ ತೀರ್ಮಾನದಂತೆ ಕರ್ನಾಟಕದಲ್ಲಿನ 101 ಪರಿಶಿಷ್ಟ ಜಾತಿಯ ಸುಮಾರು 25 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ  ಮಾಹಿತಿ ಸಂಗ್ರಹಿಸುವ ಕಾರ್ಯ ಜರುಗಲಿದೆ’ ಎಂದು ಅವರು ಹೇಳಿದರು.

‘ಸಮೀಕ್ಷೆಯ ಸಂದರ್ಭದಲ್ಲಿ ಕುಟುಂಬದ ಹಿನ್ನಲೆ, ವಿದ್ಯಾಭ್ಯಾಸ, ಕುಲಕಸುಬು, ವಾರ್ಷಿಕ ಆದಾಯ, ಮೀಸಲಾತಿಯಿಂದ ಈಗಾಗಲೇ ಪಡೆದುಕೊಂಡಿರುವ ಶೈಕ್ಷಣಿಕ, ಉದ್ಯೋಗ ಸೌಲಭ್ಯ, ರಾಜಕೀಯ, ಚರಾಸ್ತಿ, ಭೂಒಡೆತನ, ವಸತಿ ವ್ಯವಸ್ಥೆ, ಮುಂತಾದ 46 ಪ್ರಶ್ನೆ ಮತ್ತು ಉಪ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಗಣತಿದಾರರಿಂದ ಸಂಗ್ರಹಿಸಲಾಗುವುದು’ ಎಂದು ಅವರು ಹೇಳಿದರು.

‘ಪರಿಶಿಷ್ಟ ಜಾತಿಗೆ ಒಳಪಟ್ಟು ಮೀಸಲಾತಿ ಸೌಲಭ್ಯದ ಪ್ರಾತಿನಿತ್ಯದಿಂದ ವಂಚಿತವಾಗಿರುವ ಉಪಜಾತಿಗಳಿಗೆ ನ್ಯಾಯಮೂರ್ತಿ ಡಾ.ಎಚ್.ಎನ್ ನಾಗಮೋಹನದಾಸ ಅವರ ಏಕ ಸದಸ್ಯ ವಿಚಾರಣಾ ಆಯೋಗದಿಂದ ಸಾಮಾಜಿಕ ನ್ಯಾಯ ದೊರಕುವ ವಿಶ್ವಾಸವಿದೆ’ ಎಂದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page