6

ಬ್ಯಾಂಕಿನೊಳಗೆ ಭಾರೀ ಪ್ರಮಾಣದ ಬೆಂಕಿ!

ಆಕ್ಸಿಸ್ ಬ್ಯಾಂಕ್ ಕುಮಟಾ ಶಾಖೆಯಲ್ಲಿ ಮಂಗಳವಾರ ನಸುಕಿನಲ್ಲಿ ಅಗ್ನಿ ಅವಘಡ ನಡೆದಿದೆ. ಕಂಪ್ಯುಟರ್, ಪ್ರಿಂಟರ್ ಸೇರಿ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿದೆ.

ಮಣಕಿ ಮೈದಾನದ ಎದುರಿರುವ ಸನ್ಮಾನ್ ಕಾಂಪ್ಲೆಕ್ಸ್ನಲ್ಲಿ ಈ ಬ್ಯಾಂಕ್ ಕಾರ್ಯನಿವಘಹಿಸುತ್ತಿತ್ತು. ಬ್ಯಾಂಕಿನ ಒಳಗಡೆಯಿಂದ ಹೊಗೆ ಬರುವುದನ್ನು ಸನ್ಮಾನ್ ಹೊಟೇಲ್ ಸಿಬ್ಬಂದಿ ನೋಡಿದರು. ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು.

ಕುಮಟಾ ಅಗ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೊಂಡ ಅವರು ಅಲ್ಲಿಗೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಕುಮಾರ್ ಗೌಡ, ದಿನೇಶ್ ವೆಂಗುರೇಕರ್, ಮಹೇಶ್ ಶೆಟ್ಟಿ, ಗುರುನಾಥ್ ನಾಯಕ, ವಿಷ್ಣು ಗೌಡ, ಅಜಯ ನಾಯಕ ಶಾಖೆಯ ಬಾಗಿಲು ತೆಗೆಸಿ ಒಳಗೆ ನುಗ್ಗಿದರು. ಭಾರೀ ಪ್ರಮಾಣದಲ್ಲಿ ನೀರು ಹಾಯಿಸಿ ಬೆಂಕಿ ಆರಿಸಿದರು.

ಅದಾಗಿಯೂ ಹಲವು ಕಂಪ್ಯುಟರ್, ಪ್ರಿಂಟರ್ ಜೊತೆ ಪೀಠೋಪಕರಣಗಳು ಸುಟ್ಟು ಕರಕಲಾದವು. ಹಣ ಹಾಗೂ ಲಾಕರ್’ನಲ್ಲಿದ್ದ ವಸ್ತುಗಳಿಗೆ ಯಾವುದೇ ಹಾನಿ ಆಗಲಿಲ್ಲ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page