6

ಕರಾವಳಿ ಪಡೆ: ಕರ್ತವ್ಯನಿರತ ಪೊಲೀಸ್ ಶಾಶ್ವತ ಕಣ್ಮರೆ!

ಹೊನ್ನಾವರದ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿ ರಾಜೇಶ್ ಖಾರ್ವಿ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶೌಚಾಲಯದಲ್ಲಿ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ.

ಮಂಕಿ ಗ್ರಾಮದ ಮಡಿ ಊರಿನವರಾಗಿದ್ದ ರಾಜೇಶ ಖಾರ್ವಿ ಕಳೆದ ಏಳು ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿದ್ದರು. ಕೆಎನ್‌ಡಿ ವಿಭಾಗದಲ್ಲಿ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಒಂದುವರೆ ವರ್ಷದ ಹಿಂದೆ ಅವರು ಮದುವೆಯಾಗಿದ್ದು, 3 ತಿಂಗಳ ಪುಟ್ಟ ಮಗುವನ್ನು ಹೊಂದಿದ್ದರು.

ಶುಕ್ರವಾರ ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ನಂತರ ಎಲ್ಲಿಯೂ ಕಾಣಿಸಿರಲಿಲ್ಲ. ಶನಿವಾರ ಬೆಳಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಶೌಚಾಲಯಕ್ಕೆ ತೆರಳಿದಾಗ ಅಲ್ಲಿ ರಾಜೇಶ ಖಾರ್ವಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿದರು. ಅವರನ್ನು ಎಬ್ಬಿಸಿದಾಗ ಏಳಲಿಲ್ಲ.

ಅದಾದ ನಂತರ ರಾಜೇಶ ಖಾರ್ವಿ ಸಾವನಪ್ಪಿರುವುದು ಗೊತ್ತಾಗಿದೆ. ಹೃದಯಘಾತದಿಂದ ಅವರು ಸಾವನಪ್ಪಿರುವ ಶಂಕೆಯಿದೆ. ರಾತ್ರಿ ಪಾಳಿಯ ಕರ್ತವ್ಯದ ಅವಧಿಯಲ್ಲಿ ರಾಜೇಶ ಖಾರ್ವಿ ಕೊನೆಉಸಿರೆಳೆದಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page