6

ಹೊಳೆಯಲ್ಲಿ ತೇಲಿದ ಶವ: ಮಾಲಕನನ್ನು ಗುರುತಿಸಿದ ಶ್ವಾನದಳ!

ಹೊನ್ನಾವರದ ಚಂದಾವರ ಹೊಳೆಯಲ್ಲಿ ಶವ ಕಂಡ ಆ ಊರಿನ ನಾಯಿಗಳು ಸಾವನಪ್ಪಿದವರ ಸಂಬoಧಿಕರಿಗೆ ವಿಷಯ ಮುಟ್ಟಿಸಿವೆ. ಊರಿನವರು ಹೋಗಿ ನೋಡಿದಾಗ ಅದೇ ಊರಿನ ಗುರುನಾಥ ದೇಶಭಂಡಾರಿ ಸಾವನಪ್ಪಿರುವುದು ಗೊತ್ತಾಗಿದೆ.

ಹೊನ್ನಾವರದ ಮಲ್ಲಾಪುರ ಬಳಿಯ ಚಂದಾವರದಲ್ಲಿ ವಿದ್ಯಾಧರ ದೇಶಭಂಡಾರಿ ಹಾಗೂ ಗುರುನಾಥ ದೇಶಭಂಡಾರಿ ಎಂಬ ಸಹೋದರರು ಒಂದೇ ಮನೆಯಲ್ಲಿ ಎರಡು ಭಾಗ ಮಾಡಿಕೊಂಡು ವಾಸವಾಗಿದ್ದರು. ವಿದ್ಯಾಧರ ದೇಶಭಂಡಾರಿ ಅವರು ತಮ್ಮ ಪತ್ನಿ ಪುಷ್ಪಾ, ಮಕ್ಕಳಾದ ವಿಶಾಲ ಹಾಗೂ ದಿಶಾ ಜೊತೆ ಬದುಕು ಕಟ್ಟಿಕೊಂಡಿದ್ದರು. ಗುರುನಾಥ ದೇಶಭಂಡಾರಿ ಅವರು ಗೀತಾ ದೇಶಭಂಡಾರಿ ಅವರನ್ನು ವಿವಾಹವಾಗಿದ್ದು, 29 ವರ್ಷಗಳ ಹಿಂದೆಯೇ ಗೀತಾ ಅವರು ತಮ್ಮ ಮೂರು ಮಕ್ಕಳೊಂದಿಗೆ ಬೇರೆ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದರು. ಹೀಗಾಗಿ ಗುರುನಾಥ ದೇಶಭಂಡಾರಿ ಏಕಾಂಗಿಯಾಗಿದ್ದರು.

ಗುರುನಾಥ ದೇಶಭಂಡಾರಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮದ್ಯ ವ್ಯಸನಿಯಾಗಿದ್ದರು. ರಾತ್ರಿ ವೇಳೆಯಲ್ಲಿಯೂ ಮನೆಯಿಂದ ಹೊರ ಹೋಗಿ ಮನಸ್ಸಿಗೆ ಬಂದಾಗ ಮರಳುತ್ತಿದ್ದರು. ಮಾ 7ರ ಸಂಜೆ ಮನೆಯಿಂದ ಹೊರಹೋದ ಅವರು ಎರಡು ದಿನವಾದರೂ ಮರಳಿರಲಿಲ್ಲ. ಪರಿಚಯಸ್ಥರ ಬಳಿ ಅವರ ಸಹೋಧರ ವಿದ್ಯಾಧರ ದೇಶಭಂಡಾರಿ ವಿಚಾರಿಸಿದರೂ ಗುರುನಾಥ ಅವರ ಸುಳಿವು ಸಿಕ್ಕಿರಲಿಲ್ಲ.

ಮೇ 11ರಂದು ಜೋರಾಗಿ ನಾಯಿ ಬೊಗಳುತ್ತಿದ್ದವು. ವಿದ್ಯಾಧರ ದೇಶಭಂಡಾರಿ ಅವರ ಅಕ್ಕನ ಮಗ ಗಜಾನನ ದೇಶಭಂಡಾರಿ ಅವರನ್ನು ಆ ನಾಯಿಗಳು ಹೊಳೆ ಕಡೆ ಕರೆದುಕೊಂಡು ಹೋದವು. ಹೊಳೆಯಲ್ಲಿ ಅಡ್ಡಲಾಗಿ ಮಲಗಿದ ಶವವನ್ನು ತೋರಿಸಿದವು. ಹತ್ತಿರ ಹೋಗಿ ನೋಡಿದಾಗ ಗುರುನಾಥ ದೇಶಭಂಡಾರಿ ಶವವಾಗಿರುವುದು ಗಜಾನನ ದೇಶಭಂಡಾರಿ ಅವರಿಗೆ ಅರಿವಾಯಿತು. ಅದಾದ ನಂತರ ವಿದ್ಯಾಧರ ದೇಶಭಂಡಾರಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. ಗುರುನಾಥ ದೇಶಭಂಡಾರಿ ಅವರ ಕುಟುಂಬದವರಿಗೂ ವಿಷಯ ಮುಟ್ಟಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page