6

1ರೂಪಾಯಿಗೆ 80 ರೂಪಾಯಿ: ಈ ದಿನದ ದಾಳಿ ದಾಂಡೇಲಿಯಲ್ಲಿ!

1 ರೂಪಾಯಿಗೆ 80ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಂಡೇಲಿಯ ರೋಹಿದಾಸ ರಾಯ್ಕರ್, ಇರ್ಷಾದ್ ಚೌದರಿ ಹಾಗೂ ಹೈದರ್ ಅಲಿ ಈ ದಿನ ಸಿಕ್ಕಿ ಬಿದ್ದಿದ್ದಾರೆ.

ದಾಂಡೇಲಿಯ ಬೈಲಪಾರದ ರೋಹಿದಾಸ ರಾಯ್ಕರ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡಿಮೆ ಸಮಯದಲ್ಲಿ ಅಪಾರ ಹಣಗಳಿಸುವ ದುರುದ್ದೇಶದಿಂದ ಅವರು ಅಡ್ಡದಾರಿ ಹಿಡಿದರು. ದಾಂಡೇಲಿಯ ಪ್ರಭಾರ ಅಧಿಕಾರದಲ್ಲಿರುವ ಹಳಿಯಾಳ ವೃತ್ತ ನಿರೀಕ್ಷಕ ಜಯಪಾಲ ಪಟೇಲ್ ಅವರು ರೋಹಿದಾಸ ರಾಯ್ಕರ್ ನಡೆಸುವ ಅಕ್ರಮವನ್ನು ಕಂಡುಹಿಡಿದರು. ಬೈಲಪಾಲ್ ಚರ್ಚಿನ ಬಳಿ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರು ರೋಹಿದಾಸ ರಾಯ್ಕರ್ ಮೇಲೆ ದಾಳಿ ಮಾಡಿದರು. ಆ ದಿನ ಅವರು ಸಂಗ್ರಹಿಸಿದ್ದ 545ರೂ ಹಣದ ಜೊತೆ ಮಟ್ಕಾ ಸಾಮಗ್ರಿಗಳನ್ನು ವಶಕ್ಕೆಪಡೆದರು.

ಹಳೇ ದಾಂಡೇಲಿಯಲ್ಲಿ ಸೆಂಟ್ರಿAಗ್ ಕೆಲಸ ಮಾಡುವ ಇರ್ಶಾದ್ ಚೌದರಿ ಸಹ ತಮ್ಮ ಕೆಲಸ ಬಿಟ್ಟು ಮಟ್ಕಾ ಆಡಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದರು. ಪಿಎಸ್‌ಐ ಅಮೀನಸಾಬ್ ಅತ್ತಾರ್ ಇರ್ಶಾದ್ ಚೌದರಿಯ ಹೆಡೆಮುರಿ ಕಟ್ಟಿದರು. ಹಳೇ ದಾಂಡೇಲಿಯ ಗಣಪತಿ ದೇವಸ್ತಾನದ ಮುಂದೆ ಮಟ್ಕಾ ಆಡಿಸುವಾಗ ಇರ್ಶಾದ್ ಚೌದರಿ ಸಿಕ್ಕಿಬಿದ್ದರು. ಇರ್ಶಾದ್ ಕಿಸೆಯಲ್ಲಿದ್ದ 485ರೂ ಹಣದ ಜೊತೆ ಮಟ್ಕಾ ಪರಿಕ್ಕರ ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

ಜೊಯಿಡಾದ ಬಾಮಣಗಿಯಲ್ಲಿ ಟ್ರಾವೆಲ್ ಎಜೆಂಟ್ ಆಗಿ ಕೆಲಸ ಮಾಡುವ ಹೈದರ್ ಅಲಿ ಸಹ ಮಟ್ಕಾ ಮೋಹಕ್ಕೆ ಒಳಗಾಗಿದ್ದರು. ಕಮಿಶನ್ ಆಸೆಗಾಗಿ ಹೈದರ್ ಅಲಿ ಸಹ ಅಡ್ಡದಾರಿ ಹಿಡಿದಿದ್ದರು. ಈ ವಿಷಯ ಅರಿತ ವೃತ್ತ ನಿರೀಕ್ಷಕ ಜಯಪಾಲ ಪಟೇಲ್ ಅಲ್ಲಿಯೂ ಬಲೆ ಬೀಸಿದರು. ಬಾಮಣಗಿ ಕ್ರಾಸಿನ ಬಳಿ ಜೂಜಾಟ ನಡೆಸುತ್ತಿದ್ದ ಹೈದರ್ ಅಲಿ ಪೊಲೀಸರ ಬಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 370ರೂ ವಶಕ್ಕೆಪಡೆದ ಪೊಲೀಸರು ಕಠಿಣ ಕ್ರಮ ಅನುಸರಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page