6

ಕೊಳೆತ ಶವದೊಂದಿಗೆ 3ಕಿಮೀ ನಡೆದ ಪೊಲೀಸ್ ಪಡೆ!

ಜೊಯಿಡಾದ ಬಳಿಯ ಕಾಳಿ ನದಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಶವ ಮೇಲೆತ್ತಲು ಯಾರೂ ಸಿಗಲಿಲ್ಲ. ಹೀಗಾಗಿ ಪೊಲೀಸರೇ ಆ ಶವವನ್ನು ಮೇಲೆತ್ತಿ ಶವಾಗಾರಕ್ಕೆ ಸಾಗಿಸಿದರು.

ಜೊಯಿಡಾದ ನಾಗೋಡಾದಲ್ಲಿನ ಕಾಳಿ ನದಿ ಹಿನ್ನೀರ ಪ್ರದೇಶದಲ್ಲಿ ಶನಿವಾರ ಶವವೊಂದು ಕಾಣಿಸಿತು. ಶವ ಕೊಳೆತ ಸ್ಥಿತಿಯಲ್ಲಿದ್ದು ದುರ್ವಾಸನೆ ಬರುತ್ತಿತ್ತು. ಆ ಶವವನ್ನು ನದಿಯಿಂದ ಮೇಲೆತ್ತಲು ಯಾರೂ ಮುಂದೆ ಬರಲಿಲ್ಲ.

ಧಾರಾಕಾರ ಮಳೆಯ ನಡುವೆಯೂ ಪಿಎಸ್‌ಐ ಮಹೇಶ ಮಾಳಿ ಹಾಗೂ ಪೊಲೀಸ್ ಸಿಬ್ಬಂದಿ ಜಾಪರ್ ಅದರಗುಂಚಿ ಅವರು ನೀರಿಗಿಳಿದು ಆ ಶವ ಮೇಲೆ ತಂದರು. ಮಳೆ ರಾಡಿಯಿಂದ ನದಿ ದಡಕ್ಕೆ ವಾಹನ ಬರುವ ಹಾಗಿರಲಿಲ್ಲ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಲ್ಲಿನ ಇತರೆ ಪೊಲೀಸ್ ಸಿಬ್ಬಂದಿ ಸೇರಿ ಆ ಶವವನ್ನು ಮೂರು ಕಿಮೀ ಹೊತ್ತು ಸಾಗಿಸಿದರು. ಕೊನೆಗೆ ಅದನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದರು.

ಮೂರು ದಿನದ ಹಿಂದೆ ನಾಗೋಡಾ ಗ್ರಾಮದ ಸಂಜಯ ಬಾಪು ದೇಸಾಯಿ (44) ಕಾಣೆಯಾಗಿದ್ದು, ಅವರು ಈ ದಿನ ಶವವಾಗಿ ಸಿಕ್ಕಿದ್ದಾರೆ. ಮೇಲ್ನೋಟಕ್ಕೆ ಸಂಜಯ ಅವರು ಆತ್ಮಹತ್ಯೆಗೆ ಶರಣಾದ ಅನುಮಾನವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page