6

ಕಳ್ಳನ ಹಿಡಿದು ಕಾಸು ಗೆದ್ದ ಶಿರಸಿ ಪೊಲೀಸ್!

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಮೋಹನ್ ಶಿಂಧೆ ಎಂಬಾತರನ್ನು ಶಿರಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಅವರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ಅವರ ಈ ಬುದ್ದಿವಂತಿಕೆ ಮೆಚ್ಚಿ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ನಗದು ಬಹುಮಾನ ನೀಡಿದ್ದಾರೆ.

2010ರಲ್ಲಿ ಶಿರಸಿಯ ರಾಮನಬೈಲ್‌ನಲ್ಲಿ ಕಳ್ಳತನ ನಡೆದಿತ್ತು. ಆ ವೇಳೆ ಪೊಲೀಸರು ಶಿವಮೊಗ್ಗದ ಭದ್ರಾವತಿಯ ಮೋಹನ್ ಶಿಂಧೆ ಎಂಬಾತರನ್ನು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದ ಮೋಹನ ಶಿಂಧೆ ನಂತರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಶಿಕಾರಿಪುರ, ಶಿರಾಳಕೊಪ್ಪ, ಚೆನ್ನಗಿರಿ, ಹೊನ್ನಾಳಿ ಹಾಗೂ ಭಟ್ಕಳದಲ್ಲಿ ಮೋಹನ್ ಶಿಂಧೆ ತಲೆಮರೆಸಿಕೊಂಡಿದ್ದು, ಕಳ್ಳನ ಹುಡುಕಾಟ ಪೊಲೀಸರಿಗೆ ಸವಾಲಾಗಿ ಪರಿಗಣಿಸಿತ್ತು.

ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಅವರ ಸೂಚನೆ ಪ್ರಕಾರ ಶಿರಸಿ ಸಿಪಿಐ ಶಶಿಕಾಂತ ವರ್ಮ, ಪಿಎಸ್‌ಐ ನಾಗಪ್ಪ ನೇತ್ರತ್ವದಲ್ಲಿ ಮೋಹನ್ ಶಿಂಧೆ ಹುಡುಕಾಟ ಮುಂದುವರೆದಿತ್ತು. ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ, ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಗಟ್ಟಿ ಈ ಹುಡುಕಾಟದ ತಂಡದಲ್ಲಿದ್ದರು. ಜೂನ್ 7ರಂದು ಅವರೆಲ್ಲರೂ ಸೇರಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಹನ್ ಶಿಂಧೆಯ ಚಲನ-ವಲನ ಕಂಡು ಹಿಡಿದಿದ್ದರು.

ಅದರಲ್ಲಿಯೂ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಹೊನ್ನಾವರಕ್ಕೆ ತೆರಳಿದ್ದು, ಚಂದಾವರದಲ್ಲಿ ಅಲೆದಾಡುತ್ತಿದ್ದ ಮೋಹನ್ ಶಿಂಧೆಯನ್ನು ಕಂಡುಹಿಡಿದರು. ಇತರೆ ಪೊಲೀಸರ ನೆರವುಪಡೆದು ಆ ಆರೋಪಿಯನ್ನು ಅಲ್ಲಿಯೇ ಬಂಧಿಸಿದರು. ಈ ಸಾಧನೆ ಮೆಚ್ಚಿದ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿ ವಿಶ್ವನಾಥ ಭಂಡಾರಿ ಅವರಿಗೆ ನಗದು ಬಹುಮಾನ ನೀಡಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page