6

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

ಭಟ್ಕಳದಲ್ಲಿ ಕಟುಕನೊಬ್ಬ ಹಸು ಹತ್ಯೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ಎಸ್ ಅಲ್ಲಿಗೆ ತೆರಳುವುದರೊಳಗೆ ಆ ಹಸುವಿನ ವಧೆಯಾಗಿತ್ತು. ಹೀಗಾಗಿ ಹಸು ಕೊಂದ ಪಾಪಿ ಸಯ್ಯದ್ ಮಹ್ಮದ್ ಶಫಿಕ್ ಎಂಬಾತನನ್ನು ಪೊಲೀಸರು ವಶಕ್ಕೆಪಡೆದರು.

ಜೂನ್ 7ರಂದು ಭಟ್ಕಳ ಕಾರ್‌ಸ್ಟಿಟ್ ಬಳಿಯಿರುವ ಮನೆ ಅಂಗಳದಲ್ಲಿ ಸಯ್ಯದ್ ಮಹಮದ್ ಶಫಿಕ್ ಹಸು ಕಡಿಯುತ್ತಿದ್ದರು. ಕೀರ್ತಿ ಡೆಂಟಲ್ ಆಸ್ಪತ್ರೆ ಬಳಿಯ ಚೆನ್ನಪಟ್ಟಣ ದೇವಸ್ತಾನ ರಸ್ತೆಯಲ್ಲಿ ವಾಸವಾಗಿರುವ ಸಯ್ಯದ್ ಮಹಮದ್ ಶಫಿಕ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಬರ್ಮ ಮನೆ ಬಳಿ ದಾಳಿ ಮಾಡಿದ್ದರು. ಆದರೆ, ಅಷ್ಟರೊಳಗೆ ಹಸು ಹತ್ಯೆ ನಡೆದಿತ್ತು.

ಹಸು ಕೊಂದ ಸಯ್ಯದ್ ಅದರ ಮಾಂಸವನ್ನು ಬೇರೆ ಮಾಡಿದ್ದರು. 30 ಕೆಜಿ ಮಾಂಸವನ್ನು ಮಾರಾಟ ಮಾಡುವುದಕ್ಕಾಗಿ ಸಾಗಿಸುವ ಸಿದ್ಧತೆಯಲ್ಲಿದ್ದರು. ಹಸುವಿನ ಚರ್ಮವನ್ನು ಪ್ರತ್ಯೇಕವಾಗಿರಿಸಿಕೊಂಡಿದ್ದರು. ಅಷ್ಟರೊಳಗೆ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ಎಸ್ ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು.

10 ಸಾವಿರ ರೂ ಮೌಲ್ಯದ ಮಾಂಸದ ಜೊತೆ ಸಯ್ಯದ್‌ರನ್ನು ವಶಕ್ಕೆಪಡೆದರು. ಮಾಂಸ ಕಟಾವಿಗೆ ಬಳಸಿದ್ದ ಸಲಕರಣೆಯನ್ನು ಜಪ್ತು ಮಾಡಿದರು. ಕಾನೂನುಬಾಹಿರವಾಗಿ ಗೋವಧೆ ಮಾಡಿದ ಕಾರಣ ಪ್ರಕರಣ ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page