6

ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ: ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ

ಸಾರ್ವಜನಿಕ ಪ್ರದೇಶದಲ್ಲಿ ಅನಗತ್ಯ ಹೊಡೆದಾಟ-ಗಲಾಟೆ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯೂ ಗೊಂದಲ ಸೃಷ್ಠಿಸಿದ ಕಾರಣ ಪಿಎಸ್‌ಐ ನವೀನ ನಾಯ್ಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಜೂನ್ 10ರ ಸಂಜೆ ಭಟ್ಕಳದ ರಾಷ್ಟಿಯ ಹೆದ್ದಾರಿ ಬಳಿಯ ಜತಾರ್ ರೆಸ್ಟೋರೆಂಟ್ ಮುಂದೆ ಗಲಾಟೆ ನಡೆಯುತ್ತಿತ್ತು. ಇದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಮುಗ್ದುಂ ಕಾಲೋನಿಯ ವ್ಯಾಪಾರಿ ಮಹ್ಮದ್ ಇಮ್ರಾನ್, ಅದೇ ಪ್ರದೇಶದಲ್ಲಿ ಎಲೆಕ್ಟಾçನಿಕ್ ಕೆಲಸ ಮಾಡುವ ಅಬು ತಾಹಿರ್ ಸೇರಿ ಹೊನ್ನಾವರ ಕರ್ಕಿಯ ಗುತ್ತಿಗೆದಾರ ಮಹಮದ್ ಅಲ್ತಾಪ್ ಹಾಗೂ ಅದೇ ಊರಿನ ಮತ್ತೊಬ್ಬ ಗುತ್ತಿಗೆದಾರ ಅಲ್ತಾಪ ಅಬ್ದುಲ್ ಜೊತೆ ಜಗಳವಾಡುತ್ತಿದ್ದರು.

ಆ ನಾಲ್ವರ ನಡುವೆ ನಡೆದ ಜಗಳ ಹೊಡೆದಾಟದ ಸ್ವರೂಪಕ್ಕೆ ತಿರುಗಿದ್ದು, ಆ ಎಲ್ಲರೂ ಪರಸ್ಪರ ಗಾಯಗೊಂಡಿದ್ದರು. ಪೊಲೀಸರು ಅಲ್ಲಿಗೆ ಆಗಮಿಸಿ ಎಲ್ಲರನ್ನು ವಿಚಾರಣೆಗೆ ಒಳಪಡಿಸಿದರು. ಆಗ, ಯಾರೊಬ್ಬರೂ ಸತ್ಯ ಹೇಳಲಿಲ್ಲ. ಹೀಗಾಗಿ ಹೊಡೆದಾಟದ ಕಾರಣವೂ ಗೊತ್ತಾಗಲಿಲ್ಲ. ಅವರ ಹೊಡೆದಾಟದಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸಿದ್ದು, ಭಟ್ಕಳ ಪಿಎಸ್‌ಐ ನವೀನ ನಾಯ್ಕ ಆ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page