6

ಮುಂಡಗೋಡು: ಬೈಕ್ ಕದ್ದವನ ಬಂಧನ

ಮುoಡಗೋಡು ಪಟ್ಟಣ ಪಂಚಾಯತ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಯಲ್ಲಾಪುರದ ನಾಸೀರ ಸಿದ್ಧಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಬೈಕನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.

ಮುತ್ತಣ್ಣ ಭೋವಿ ಎಂಬಾತರು ಪ ಪಂ ಸಮೀಪದ ನೌಕರ ಭವನದ ಎದುರು ತಮ್ಮ ಬೈಕ್ ನಿಲ್ಲಿಸಿದ್ದರು. ಕೆಲಸಕ್ಕೆ ಹೋಗಿ ಮರಳಿದಾಗ ಅವರ ಬೈಕು ಅಲ್ಲಿರಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ಬಜಾಜ್ ಪ್ಲಾಟಿನಾ ಬೈಕ್ ಕಾಣೆಯಾದ ಬಗ್ಗೆ ದೂರಿದ್ದರು.

ಹುಡುಕಾಟ ನಡೆಸಿದ ಮುಂಡಗೋಡು ಪೊಲೀಸರು ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ದಿಯನ್ನು ವಿಚಾರಿಸಿದರು. ಮುತ್ತಣ್ಣ ಭೋವಿ ಅವರ ಬೈಕ್ ನಾಸೀರ್ ಬಳಿಯಿರುವುದನ್ನು ಕಂಡುಹಿಡಿದರು. ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ, ವಿನೋದ ಎಸ್.ಕೆ, ಪೊಲೀಸ್ ಸಿಬ್ಬಂದಿ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಸೇರಿ ಆ ಬೈಕಿನ ಜೊತೆ ನಾಸೀರ್ ಸಿದ್ದಿಯನ್ನು ವಶಕ್ಕೆಪಡೆದರು.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page