6

ಬೈಕಿಗೆ ಗುದ್ದಿದ ಪೆಟ್ರೋಲ್ ಟ್ಯಾಂಕರ್: ಒಂದು ಸಾವು

ಯಲ್ಲಾಪುರದ ಮಲ್ಲಿಕಾ ಹೊಟೇಲ್ ಬಳಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸಂಬಾಜಿ ಮಿರಾಶಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಜೂನ್ 13ರಂದು ಹಳಿಯಾಳದ ಸಂಕನಕೊಪ್ಪದ ಸಂಬಾಜಿ ಮಿರಾಶಿ (50) ಅವರು ಯಲ್ಲಾಪುರದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಎದುರಿನಿಂದ ಟ್ಯಾಂಕರ್ ಓಡಿಸಿಕೊಂಡು ಬಂದ ವಿಜಯಪುರದ ಕೆಂಚಪ್ಪ ಶಾಂತಪ್ಪಣ್ಣವರ್ ಆ ಬೈಕಿಗೆ ತಮ್ಮ ಲಾರಿ ಗುದ್ದಿದರು. ಗುದ್ದಿದ ರಭಸಕ್ಕೆ ಬೈಕಿನಿಂದ ಬಿದ್ದ ಸಂಬಾಜಿ ಮಿರಾಶಿ ಅಲ್ಲಿಯೇ ಪ್ರಾಣ ಬಿಟ್ಟರು.

ಪೊಲೀಸರು ಸ್ಥಳಕ್ಕೆ ದಾವಿಸಿದರು. ಪಿಎಸ್‌ಐ ಯಲ್ಲಲಿಂಗ ಕನ್ನೂರು, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಹಾಗೂ ಶೇಡಜಿ ಚೌಹಾಣ ಸ್ಥಳಕ್ಕೆ ದೌಡಾಯಿಸಿದರು. ಅಪಘಾತದ ವಿವರಪಡೆದು ಲಾರಿ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು.

ಹಳಿಯಾಳ ಸಂಕನಕೊಪ್ಪದ ಪ್ರಶಾಂತ ಮಿರಾಶಿ ಅವರು ಆಗಮಿಸಿ ತಂದೆ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದರು. ಪಿಐ ರಮೇಶ ಹಾನಾಪುರ ಅವರು ತನಿಖೆ ನಡೆಸುತ್ತಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page