6

ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

ಗೋವಾದಿಂದ ಅಗ್ಗದ ಸರಾಯಿ ತಂದು ಮಾರಾಟ ಮಾಡುವ ಮೂಲಕ ಕಾರವಾರದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಪೊಲೀಸರಿಗೆ ಒಪ್ಪಿಸಿ ತಾವು ಪರಾರಿಯಾಗಿದ್ದಾರೆ!

ಕಾರವಾರದ ಕಡವಾಡ ಹಳೆಕೋಟದಲ್ಲಿ ಸುರೇಶ ಕಲ್ಗುಟ್ಕರ್ ಹಾಗೂ ಪಲ್ಲವಿ ಕಲ್ಗುಟ್ಕರ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದರು. ಆ ಅಂಗಡಿಯಲ್ಲಿ ಅಕ್ರಮ ಸರಾಯಿಯನ್ನು ಸಹ ಅವರು ಮಾರುತ್ತಿದ್ದರು. ಗೋವಾದಿಂದ ಕಡಿಮೆ ಬೆಲೆಗೆ ಬಗೆ ಬಗೆಯ ಬಾಟಲಿಗಳನ್ನು ತಂದು ಅದನ್ನು ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಗೋವಾ ಸರಾಯಿ ಮಾರಾಟದಿಂದ ರಾಜ್ಯ ಸರ್ಕಾರದ ತೆರಿಗೆ ವಂಚನೆ ಆಗುತ್ತಿರುವುದನ್ನು ಅರಿತ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಅವರ ಅಂಗಡಿ ಮೇಲೆ ದಾಳಿ ಮಾಡಿದರು. ಜೂನ್ 17ರಂದು ಗ್ರಾಮೀಣ ಠಾಣೆ ಪಿಎಸ್‌ಐ ನೇಹಾಲ್ ಖಾನ್ ಅವರ ಅಂಗಡಿಗೆ ಭೇಟಿ ನೀಡಿದಾಗ 4050ರೂ ಮೌಲ್ಯದ ಗೋವಾ ಸರಾಯಿ ಸಿಕ್ಕಿತು. ಪೊಲೀಸರನ್ನು ಕಂಡ ಸುರೇಶ ಕಲ್ಗುಟ್ಕರ್ ತಮ್ಮ ಪತ್ನಿ ಪಲ್ಲವಿ ಕಲ್ಗುಟ್ಕರ್ ಅವರನ್ನು ಅಂಗಡಿಯಲ್ಲಿಯೇ ಬಿಟ್ಟು ಅಲ್ಲಿಂದ ಓಡಿದರು.

ಪಲ್ಲವಿ ಕಲ್ಗುಟ್ಕರ್ ಅವರ ಜೊತೆ ಗೋವಾ ಸರಾಯಿಯನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದು, ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಬಿಟ್ಟು ಪರಾರಿಯಾದ ಸುರೇಶ ಕಲ್ಗುಟ್ಕರ್ ಹುಡುಕಾಟ ಮುಂದುವರೆದಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page