6

ಅಂಕೋಲಾ: ಜೂಜಾಡಿ ಸಿಕ್ಕಿಬಿದ್ದ ಸರ್ಕಾರಿ ನೌಕರ!

ಅಂಕೋಲಾದ ಹೊಸಗದ್ದೆಯ KSRTC ನೌಕರ ರಾಜೇಶ ಗೌಡ ಜೂಜಾಟದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ಪೊಲೀಸರು ರಾಜೇಶ ಗೌಡ ಜೊತೆ ಇನ್ನೂ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಜೂನ್ 7ರಂದು ರಾಜೇಶ ಗೌಡ ಅವರು ಹುಲಿದೇವರವಾಡದ ಬೆಳೆಸೆ ಗ್ರಾಮದ ಹಳ್ಳದ ಹತ್ತಿರ ಹಣ ಹೂಡಿಕೆಗೆ ಹೋಗಿದ್ದರು. ಕೂಲಿ ಕಾರ್ಮಿಕ ಗುರು ಗೌಡ, ಮಾದನಗೇರಿಯ ಮೀನುಗಾರ ವಿನಾಯಕ ಹರಿಕಂತ್ರ, ಬಬ್ರುವಾಡದ ಕೂಲಿ ಕಾರ್ಮಿಕ ನಾಗರಾಜ ನಾಯ್ಕ ಹಾಗೂ ಬೆಳಂಬಾರದ ಮುದ್ರಾಣಿ ಬಳಿಯ ಹರೀಶ ಗೌಡ ಜೊತೆ ಸೇರಿ ಇಸ್ಪೀಟ್ ಆಡುತ್ತಿದ್ದರು. `ಹೊರಗೆ 500ರೂಪಾಯಿ.. ಒಳಗೆ 500ರೂಪಾಯಿ’ ಎಂದು ದೊಡ್ಡದಾಗಿ ಕೂಗುತ್ತ ಇಸ್ಪಿಟ್ ಎಲೆಗಳ ಮೇಲೆ ಅವರೆಲ್ಲರೂ ಹಣ ಕಟ್ಟಿದ್ದರು.

ಕಾಡಿನ ಕಡೆಯಿಂದ ಬಂದ ಕೂಗಾಟದ ಸದ್ದು ಕೇಳಿದ ಅಂಕೋಲಾ ಪಿಎಸ್‌ಐ ಉದ್ದಪ್ಪ ಧರೇಪ್ಪನವರ್ ಅಲ್ಲಿಗೆ ತೆರಳಿ ದಾಳಿ ಮಾಡಿದರು. ಆಗ, ಹರೀಶ ಗೌಡ ಅಲ್ಲಿಂದ ಓಡಿ ಪರಾರಿಯಾದರು. ಅಲ್ಲಿದ್ದ 5400ರೂ ಹಣ ಹಾಗೂ ಉಳಿದವರನ್ನು ವಶಕ್ಕೆಪಡೆದ ಪೊಲೀಸರು ಕಾನೂನುಬಾಹಿರ ಆಟವಾಡುತ್ತಿದ್ದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಯಾಲಯದ ಸೂಚನೆ ಮೇರೆ ಆ ಎಲ್ಲರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page