6

ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

ಕಾರವಾರದ ಮಲ್ಲಿಕಾರ್ಜುನ ಟೈಲ್ಸ & ಸಿರಾಮಿಕ್ಸ ಮಾಲಕ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಗ್ರಾನೆಟ್ ಕಲ್ಲು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಮುದ್ದಣ್ಣ ಹಾಲುಂಡಿ (53) ಅವರು ಉಪ್ಪಾರ ಸಮುದಾಯದ ಮುಖಂಡರಾಗಿದ್ದರು. ಕೊಪ್ಪಳ ಜಿಲ್ಲೆಯವರಾದ ಅವರು ಕಾರವಾರದ ಬಾಂಡಿಶೆಟ್ಟಾದಲ್ಲಿ ಮನೆ ಮಾಡಿಕೊಂಡಿದ್ದರು. ಅಸ್ನೋಟಿಯ ಕೊಳಗೆ ಗ್ರಾಮದ ಬಳಿ ಅವರು ಗ್ರಾನೆಟ್ ಸಂಗ್ರಹಿಸಿಟ್ಟುಕೊoಡಿದ್ದರು. ಗುರುವಾರ ತಮ್ಮ ಮಳಿಗೆಗೆ ಬಂದ ಗ್ರಾಹಕರಿಗೆ ಗ್ರಾನೆಟ್ ಹಾಗೂ ಟೈಲ್ಸುಗಳನ್ನು ಕಾಣಿಸುತ್ತಿದ್ದರು.

ಗ್ರಾಹಕರು ಆಯ್ಕೆ ಮಾಡಿಕೊಂಡ ಕಡಪವನ್ನು ರಿಕ್ಷಾಗೆ ತುಂಬುವ ಕೆಲಸದಲ್ಲಿ ಅವರು ನಿರತರಾದರು. ಕೆಲಸದ ಸಿಬ್ಬಂದಿ ಪ್ರಕಾಶ ಬಾಂದೇಕರ್ ಜೊತೆಗೂಡಿ ಅವರು ರಿಕ್ಷಾ ಒಳಗೆ ಕಡಪ ಕಲ್ಲುಗಳನ್ನು ತುಂಬಿದ್ದರು. ಪ್ರಕಾಶ ಬಾಂದೇಕರ್ 6 ಅಡಿ ಉದ್ದದ ಗ್ರಾನೇಟಿಗೆ ಹಗ್ಗ ಕಟ್ಟುತ್ತಿರುವಾಗ ಆ ಕಲ್ಲು ನೆಲಕ್ಕೆ ಅಪ್ಪಳಿಸಿತು. ರಿಕ್ಷಾದೊಳಗೆ ಕಡಪ ಸರಿಯಾಗಿ ನಿಲ್ಲಿಸುತ್ತಿರುವ ಅವಧಿಯಲ್ಲಿಯೇ 7ಕ್ಕೂ ಅಧಿಕ ಕಡಪ ಕಲ್ಲುಗಳು ಒಮ್ಮೆಲೆ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಅಪ್ಪಳಿಸಿದವು.

ಆ ಕಲ್ಲುಗಳ ಅಡಿಗೆ ಬಿದ್ದ ಮುದ್ದಣ್ಣ ಹಾಲುಂಡಿ ಅವರನ್ನು ಅಲ್ಲಿದ್ದವರು ತಕ್ಷಣ ಹೊರಕ್ಕೆ ಎಳೆದು ಉಪಚರಿಸಿದರು. ಆಸ್ಪತ್ರೆಗೂ ಕರೆದೊಯ್ದರು. ಆದರೆ, ಮುದ್ದಣ್ಣ ಹಾಲುಂಡಿ ಅವರು ಗ್ರಾನೆಟ್ ಬಿದ್ದಾಗಲೇ ಸಾವನಪ್ಪಿದ್ದು, ವೈದ್ಯರು ಸಾವನ್ನು ದೃಢೀಕರಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page