6

ಹೆದ್ದಾರಿಗೆ ಬಿದ್ದ ಮರ: ಆಂಬುಲೆನ್ಸಿನಲ್ಲಿದ್ದ ರೋಗಿಗಳ ಪರದಾಟ

ಯಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಎರಡು ಆಂಬುಲೆನ್ಸ್ ಮುಂದೆ ಚಲಿಸಲಾಗದೇ ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಮರ ಬಿದ್ದು ತಾಸು ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರೇ ಮರ ತೆರವು ಮಾಡಿ ಆಂಬುಲೆನ್ಸಿಗೆ ರಸ್ತೆ ಬಿಟ್ಟು ಕೊಟ್ಟಿದ್ದಾರೆ.

ಶುಕ್ರವಾರ ಹಳಿಯಾಳ ಕ್ರಾಸ್‌ನ ಬಳಿ ದೊಡ್ಡ ಮರ ಬಿದ್ದಿತು. ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಎರಡು ಕಡೆ ವಾಹನಗಳು ನಿಂತಿದ್ದವು. ಸುಮಾರು 5ಕಿಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಎರಡು ಆಂಬುಲೆನ್ಸ ಸಹ ಅಲ್ಲಿಗೆ ಬಂದಿದ್ದು, ಅವು ಮುಂದೆ ಸಾಗಲಾರದೇ ಅಲ್ಲಿಯೇ ಸಿಲುಕಿಕೊಂಡವು.

ತಾಸು ಕಳೆದರೂ ಮರ ತೆರವು ಮಾಡಲು ಅರಣ್ಯ ಸಿಬ್ಬಂದಿ ಬರಲಿಲ್ಲ. ಹೀಗಾಗಿ ಅಲ್ಲಿನ ಹೊಟೇಲ್ ವ್ಯಾಪಾರಿ ಮಂಜುನಾಥ ಶಿಂಧೆಕರ್ ಕಾರ್ಯಾಚರಣೆಗಿಳಿದರು. ಸ್ಥಳೀಯರು ಹಾಗೂ ವಿವಿಧ ವಾಹನ ಸವಾರರು ಕಾರ್ಯಾಚರಣೆಗೆ ಕೈ ಜೋಡಿಸಿದರು. ಇದಾದ ನಂತರ ಅರಣ್ಯ ಇಲಾಖೆಯ ಜೀಪ್ ಆಗಮಿಸಿದ್ದು, ಅಧಿಕಾರಿಗಳು ಜೀಪಿನಿಂದ ಕೆಳಗೆ ಇಳಿಯದ ಕಾರಣ ಅಲ್ಲಿದ್ದವರು ಆಕ್ರೋಶವ್ಯಕ್ತಪಡಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page