6

ಕಾರಿನಿಂದ ಇಳಿದು ರಿಕ್ಷಾದಲ್ಲಿ ಓಡಾಡಿದ ಡೀಸಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರಿಗೆ ಸರ್ಕಾರ ಐಷಾರಾಮಿ ಇನೋವಾ ಕ್ರಿಸ್ಟಾ ಕಾರು ನೀಡಿದೆ. ಅದಾಗಿಯೂ, ಅವರು ರಿಕ್ಷಾದಲ್ಲಿ ಓಡಾಟ ನಡೆಸಿದ್ದಾರೆ!

ಗೋವಾ, ಗುಜರಾತ್ ಹಾಗೂ ಬೆಂಗಳೂರಿನ ಕೆಲವು ಕಡೆ ಹೆಚ್ಚಿನ ಸಂಖ್ಯೆಯಲ್ಲಿ `ಪಿಂಕ್ ಆಟೋ’ ಸಂಚರಿಸುತ್ತದೆ. ಮಹಿಳಾ ಚಾಲಕರಿಗೆ ಮಾತ್ರ ಚಾಲನೆಗೆ ಸಿಗುವ ಈ ರಿಕ್ಷಾವನ್ನು ರೋಟರಿ ಕ್ಲಬ್ ಹೊನ್ನಾವರಕ್ಕೆ ತರಿಸಿದೆ. ತನ್ನ ಸಾಮಾಜಿಕ ಚಟುವಟಿಕೆಯ ಭಾಗವಾಗಿ ರೋಟರಿ ಕ್ಲಬ್ ಬಡ ಮಹಿಳೆಯರಿಗೆ ಆ ರಿಕ್ಷಾವನ್ನು ವಿತರಿಸಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಹೆಣ್ಣು ಮಕ್ಕಳು ಈ ಎಲೆಕ್ಟಿçಕಲ್ ರಿಕ್ಷಾ ಬಳಸಿ ದಿನಕ್ಕೆ 2 ಸಾವಿರ ರೂ ಆದಾಯಗಳಿಸಬಹುದಾಗಿದ್ದು, ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಂಗಳವಾರ ರಿಕ್ಷಾವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ.

ಮಹಿಳೆಯರಿಬ್ಬರಿಗೆ ರಿಕ್ಷಾ ಹಸ್ತಾಂತರದ ನಂತರ ಕೆ ಲಕ್ಷ್ಮೀಪ್ರಿಯಾ ಅವರು ಅದೇ ರಿಕ್ಷಾದಲ್ಲಿ ಸುತ್ತಾಟ ನಡೆಸಿದರು. ಬಡ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. `ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಧೈರ್ಯ ಹೇಳಿದರು. ಮಹಿಳೆಯರು ಸ್ವ ಉದ್ಯೋಗ ಮಾಡುವಾಗ ಕೆಲವರು ಅದಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಯಾರೇ ಸಮಸ್ಯೆ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವೆ’ ಎಂದು ಜಿಲ್ಲಾಧಿಕಾರಿಗಳು ವೇದಿಕೆಯಲ್ಲಿಯೇ ಎಚ್ಚರಿಸಿದರು.

`ಒಂದು ರಿಕ್ಷಾಗೆ 4 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಕನಸಿನ ಯೋಜನೆ ಇಂದು ಈಡೇರಿದೆ. ವಿಧವೆ ಹಾಗೂ ಅಂಗವಿಕಲ ಪತಿ ಹೊಂದಿದ ಬಡ ಮಹಿಳೆಯರಿಬ್ಬರನ್ನು ಆಯ್ಕೆ ಮಾಡಿ ಅವರಿಗೆ ಪಿಂಕ್ ರಿಕ್ಷಾ ಒದಗಿಸಿದ್ದೇವೆ’ ಎಂದು ರೋಟರಿ ಅಧ್ಯಕ್ಷ ಸೂರ್ಯಕಾಂತ ಸಾರಂಗ ಅವರು ಹೆಮ್ಮೆಯಿಂದ ಮಾತನಾಡಿದರು. ಜಿಲ್ಲಾಧಿಕಾರಿ ಬಳಿಯಿಂದ ರಿಕ್ಷಾಪಡೆದ ಜ್ಯೋತಿ ಪಾಲ್ ಹಾಗೂ ಸುಶ್ಮಿತಾ ಕೆಲಸಿ ಖುಷಿಯಿಂದ ಹೊನ್ನಾವರ ಪೇಟೆ ಸುತ್ತಾಡಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page