6

ಜೂಜಾಟ: ಮೀನುಗಾರ-ಆಟೋ ಚಾಲಕ-ಕಟ್ಟಡ ಕಾರ್ಮಿಕನ ಜೊತೆ ರೈತನೂ ಸಿಕ್ಕಿಬಿದ್ದ!

ಅಂಕೋಲಾದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು ಏಳು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ.

ಅಂಕೋಲಾ ಬೆಳಂಬಾರದ ಉತ್ತರಖಾರ್ವಿವಾಡದ ಅರಣ್ಯ ಪ್ರದೇಶದಲ್ಲಿ ಜೂನ್ 22ರಂದು ಜೂಜಾಟ ನಡೆಯುತ್ತಿತ್ತು. ಮಂಜಗುಣಿಯ ಮೀನುಗಾರ ಬೀರಣ್ಣ ನಾಯ್ಕ, ಬೆಳಂಬಾರ ತಾಳಬೈಕಿನ ಆಚಾರಿ ರವಿ ಶೆಟ್ಟಿ, ಬೆಳಂಬಾರ ಮಧ್ಯಖಾರ್ವಿವಾಡದ ಮೀನುಗಾರ ಜಗದೀಶ ಖಾರ್ವಿ ಜೊತೆಗೆ ಬೆಳಂಬಾರದ ರಿಕ್ಷಾ ಚಾಲಕ ರವಿ ಗೌಡ ಸೇರಿ ಜೂಜಾಡುತ್ತಿದ್ದರು. ಬೆಳಂಬಾರ ಮುಂದ್ರಾಣಿಯ ಕಟ್ಟಡ ಕಾರ್ಮಿಕ ರಾಜೇಶ ಗೌಡ, ಶೆಟ್ಟಗೇರಿಯ ರೈತ ಸತೀಶ ನಾಯ್ಕ, ಬೆಳಂಬಾರ ಉತ್ತರಖಾರ್ವಿವಾಡದ ಮೀನುಗಾರ ಆನಂದ ಖಾರ್ವಿ ಸಹ ಅವರ ಜೊತೆಗಾರರಾಗಿದ್ದರು.

ಜೂಜಾಟದ ಬಗ್ಗೆ ಮಾಹಿತಿ ಅರಿತ ಅಂಕೋಲಾ ಪಿಎಸ್‌ಐ ಪಿಎಸ್‌ಐ ಉದ್ದಪ್ಪ ಧರಪ್ಪನವರ್ ತಮ್ಮ ತಂಡದೊAದಿಗೆ ಅಲ್ಲಿಗೆ ಹೋದರು. ಇಸ್ಪಿಟ್ ಎಲೆಗಳನ್ನು ಹರಡಿಕೊಂಡು `ಹೊರಗೆ 500ರೂ ಒಳಗೆ 500ರೂ’ ಎನ್ನುತ್ತಿದ್ದವರನ್ನು ಅವರು ವಿಚಾರಣೆಗೆ ಒಳಪಡಿಸಿದರು. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಎಲ್ಲರನ್ನು ಹಿಡಿದರು. ಅಲ್ಲಿದ್ದ ಸಾಮಗ್ರಿಗಳ ಜೊತೆ 7250ರೂ ಹಣವನ್ನು ವಶಕ್ಕೆಪಡೆದರು. ಜೂಜುಕೋರರ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಅಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page