6

ಅರಬೈಲ್ ಶಾಲೆಯಲ್ಲಿ ಕವನ ಆಲಿಸಿ, ಭಾವಾರ್ಥ ಗೃಹಿಸಿದ ಮಕ್ಕಳು

ಯಲ್ಲಾಪುರ: ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕವನ ಆಲಿಸೋಣ ಭಾವಾರ್ಥ ಗೃಹಿಸೋಣ’ ಕಲಿಕಾಫಲ ಆಧಾರಿತ ಉಪನ್ಯಾಸ, ಮುಂಗಾರು ಕವಿಗೋಷ್ಠಿ ನಡೆಯಿತು.

ಮುಂಗಾರು ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಪ್ರಥಮ ಭಟ್ಟ, ಪವಿತ್ರಾ ಸಿದ್ದಿ, ಮಾನ್ಯಾ ಭಟ್ಟ, ಸಿಂಚನಾ ದೇವಾಡಿಗ,
ಆರಾಧ್ಯಾ ಭಟ್ಟ, ಸೃಷ್ಟಿ ಮರಾಠಿ, ಗಗನಾ ಗೌಡ,ಚಂದನ‌ ಆಚಾರಿ, ರಾಮಕೃಷ್ಣ ಹೆಗಡೆ, ಅಭಿಷೇಕ ಹೆಬ್ಬಾರ್, ಅಭಿನವ ಭಟ್ಟ ಕವನ ವಾಚಿಸಿದರು.

ಸಾಹಿತಿ ಸುಬ್ರಾಯ ಬಿದ್ರೆಮನೆ ಉಪನ್ಯಾಸ ನೀಡಿ, ಸಹಜವಾಗಿ, ಸರಳವಾಗಿ ನಯವಾಗಿ ಹೂವು ಅರಳುವಂತೆ ಕವಿತೆಯ ಶೈಲಿ ಇದ್ದರೆ, ಸೊಗಸೆನಿಸುತ್ತದೆ.ಸಾಹಿತ್ಯಿಕ ಅಂಶಗಳನ್ನು ಓದುವ, ಕುತೂಹಲದಿಂದ ಗೃಹಿಸುವ ಮೂಲಕ ಸಾಹಿತ್ಯ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ, ಸಾಹಿತಿ ಶಿವಲೀಲಾ ಹುಣಸಗಿ ಮಾತನಾಡಿ,’ಮನದಲ್ಲಿ ಮೂಡಿದ ಭಾವನೆಗಳನ್ನು ಪದಗಳಲ್ಲಿ ಹಿಡಿದಿಟ್ಟು ಪೋಣಿಸಿ ಕವಿತೆ ರಚಿಸುವುದು ಸುಲಭವಲ್ಲ. ಓದಿದ ವಿಷಯದ ಭಾವಾರ್ಥ ಗೃಹಿಸಬೇಕು. ಮನಸ್ಸಿಗೆ ಅನಿಸಿದ್ದನ್ನು ಅಕ್ಷರರೂಪಕ್ಕೆ ಇಳಿಸಿ, ತಿದ್ದಿ-ತೀಡಿ ಬರವಣಿಗೆಯ ಕೌಶಲ್ಯ ಬೆಳೆಸಿಕೊಳ್ಳುಬೇಕು ಎಂದರು.

ಪಾಲಕ ಪ್ರತಿನಿಧಿಗಳಾದ ವಿಘ್ನೇಶ್ವರ ಭಟ್ಟ ಅರಬೈಲ್, ಗೀತಾ ಸಿದ್ದಿ, ಶಿಕ್ಷಕರಾದ ಮಹೇಶ ಭಟ್ಟ, ಸುಶ್ಮಿತಾ ನಾಯಕ ಉಪಸ್ಥಿತರಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page