6

ಮಣ್ಣಿನಡಿ ಸಿಲುಕಿ ಸಾವನಪ್ಪಿದ ಹಣ್ಣು ಮಾರಾಟಗಾರ್ತಿ

ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ.
ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್’ದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮೇಲೆ ಅವರು ವಾಸವಾಗಿದ್ದ ಮಣ್ಣಿನ ಮನೆಯ ಗೋಡೆ ಬಿದ್ದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಮನೆ ಕುಸಿದಿದ್ದು, ಅವರು ಅಲ್ಲಿಯೇ ಕೊನೆಉಸಿರೆಳೆದಿದ್ದಾರೆ. ಈಕೆಯ ಮಗ ಗಣಪತಿ ಮಾಂಜ್ರೇಕರ್ ತನ್ನ ಮಕ್ಕಳ ವಿದ್ಯಾಬ್ಯಾಸದ ಸಲುವಾಗಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನಿತ್ಯ ತಾಯಿಯನ್ನು ನೋಡಲು ಮಣ್ಣಿನ ಮನೆಗೆ ಬರುತ್ತಿದ್ದ. ಜೂ 28ರಂದು ಮಧ್ಯಾಹ್ನ ಮನೆಗೆ ಬಂದಾಗ ಇಡೀ ಮನೆ ಕುಸಿದಿರುವುದು ಕಾಣಿಸಿದೆ. ತಾಯಿಯ ಹುಡುಕಾಟ ನಡೆಸಿದಾಗ ಆಕೆ ಮಣ್ಣಿನ ಅಡಿಗೆ ಬಿದ್ದಿದ್ದು, ಮಣ್ಣನ್ನು ಸರಿಸಿದಾಗ ಆಕೆ ಸಾವನಪ್ಪಿರುವುದು ಅರಿವಿಗೆ ಬಂದಿದೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page