6

ಕೇವಲ ರೂ.1ಕ್ಕೆ ಬಿ.ಎಸ್.ಎನ್.ಎಲ್ ಸಿಮ್!

ಹಾವೇರಿ : ಬಿ.ಎಸ್.ಎನ್.ಎಲ್ ವತಿಯಿಂದ ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, 4ಜಿ ಸೇವೆ ಬಳಸಲು ಅನುಕೂಲವಾಗುವಂತೆ ಸಿಮ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರಿಗೆ ಬಿ.ಎಸ್.ಎನ್.ಎಲ್‌ನ 2ಜಿ ಹಾಗೂ 3ಜಿ ಸಿಮ್‌ಗಳನ್ನು 4ಜಿ ಸಿಮ್‌ಗಳಿಗೆ ಬದಲಾಯಿಸಿಕೊಳ್ಳಲು ಅವಕಾಶವಿದ್ದು, ಪ್ರಸ್ತುತ ಸಿಮ್‌ಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡಿಕೊಳ್ಳುವಂತೆ ಬಿ.ಎಸ್.ಎನ್.ಎಲ್ ಹಾವೇರಿ ಕಚೇರಿ ತಿಳಿಸಿದೆ.

ಇನ್ನು ಬಿ.ಎಸ್.ಎನ್.ಎಲ್ 4ಜಿ ಸೇವೆಯನ್ನು ಪಡೆಯಲು ಕೇವಲ ರೂ.1ಕ್ಕೆ ಸಿಮ್‌ಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಅದೇ ರೀತಿ, ನಗರ ಪ್ರದೇಶಗಳಿಗೆ ರೂ.399ರ FTTH ಇಂಟರ್ನೆಟ್ ಯೋಜನೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ರೂ.259ರ FTTH ಯೋಜನೆ ಲಭ್ಯವಿದೆ. ಇದರ ಜೊತೆಗೆ ಎಂಟರ್‌ಪ್ರೈಸ್ ಬಿಸಿನೆಸ್ (Enterprise Business) ಸೇವೆಗಳಿಗೂ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಬಿ.ಎಸ್.ಎನ್.ಎಲ್ ನೀಡುತ್ತಿರುವ 4ಜಿ, FTTH ಹಾಗೂ ಇತರ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಕೋರಲಾಗಿದೆ.

Related Posts

ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

You cannot copy content of this page