6

ಜಮೀನು ವ್ಯಾಜ್ಯ: ನಕಲಿ ಪತ್ರಕರ್ತನ ವಿರುದ್ಧ ಮತ್ತೊಂದು ದೂರು

ಶಿರಸಿ: ಚಿಪಗೇರಿಯ ಮಹಾಬಲೇಶ್ವರ ಭಟ್ಟ ಎಂಬಾತರ ತೋಟ ಖರೀದಿಗೆ ಬಂದಿದ್ದ ಸಿದ್ದರಾಮೇಶ‌ ಮೆಣಸಿನಕಾಯಿ ಎಂಬಾತರನ್ನು ವಂಚಿಸಿದ ನಕಲಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ 35 ಸಾವಿರ ರೂ ವಂಚಿಸಿದ ದೂರು ದಾಖಲಾಗಿದೆ.
ಮಹಾಬಲೇಶ್ವರ ಹೆಗಡೆ ತೋಟ ಖರೀದಿಸಿಲು ಸಿದ್ದರಾಮೇಶ ಅವರು 2022ರಲ್ಲಿ 10 ಲಕ್ಷ ರೂ ಮುಂಗಡ ಹಣ ನೀಡಿದ್ದರು. ಆದರೆ, ಮಹಾಬಲೇಶ್ವರ ಹೆಗಡೆ ಜಮೀನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಆಗ ಪ್ರವೇಶಿಸಿದ ಮಹಾಬಲೇಶ್ವರ ಹೆಗಡೆಯ ಸಂಬಂಧಿ ರವೀಶ ಹೆಗಡೆ ಜಮೀನು ಖರೀದಿಸಲು ‘ಬ್ಯುಸಿನೆಸ್ ಅಕೊಂಟ್’ ಮಾಡಿಕೊಡುವುದಾಗಿ ತಿಳಿಸಿ 35 ಸಾವಿರ ರೂ ಹಣ ಪಡೆದಿದ್ದ. ನಂತರ ಮಣಿಕಂಠ ನಾಯ್ಕ ಎಂಬಾತನ ಹೆಸರಿನಲ್ಲಿ ಜಮೀನು ಖರೀದಿಗೆ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದ. ಆದರೆ, ಈವರೆಗೂ ಜಮೀನು ವ್ಯವಹಾರ ಮಾಡಿಕೊಡದೇ, ಹಣವನ್ನು ಮರಳಿಸಿದೇ ವಂಚಿಸಿದ ಬಗ್ಗೆ ಸಿದ್ದರಾಮೇಶ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page