6

ಕಾಲೇಜು ಅಭಿವೃದ್ಧಿಗೆ ಅಧ್ಯಕ್ಷನೇ ಅಡ್ಡಿ: ಪ್ರಾಚಾರ್ಯ ಆರೋಪ

ಹೊನ್ನಾವರ: `ಬಿ ಎಸ್ ಡಬ್ಲು ಅರೇಅಂಗಡಿ ಕಾಲೇಜು ಅಭಿವೃದ್ಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಡಿ.ಡಿ ಮೆಚ್ಚಣ್ಣನವರ್ ತೊಡಕಾಗಿದ್ದಾರೆ’ ಎಂದು ಅದೇ ಕಾಲೇಜಿನ ಪ್ರಾಚಾರ್ಯ ಅರುಣ ನಾಯ್ಕ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಧ್ಯಕ್ಷರು ಪ್ರಾಚಾರ್ಯರ ಸಹಿ ನಕಲು ಮಾಡಿ, ಕಾಲೇಜು ಸ್ಥಳಾಂತರ ವಿಷಯವಾಗಿ ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ನನ್ನ ಸಹಿ ಪೋರ್ಜರಿ ಆಗಿರುವ ಬಗ್ಗೆ ದೂರು ನೀಡಿದ್ದೇನೆ’ ಎಂದರು. `ಜಿಲ್ಲೆಯ ಪ್ರಥಮ ಸಮಾಜಕಾರ್ಯ ಶಿಕ್ಷಣ ಪದವಿ ಕಾಲೇಜು ಆಗಿರುವ ತಾಲೂಕಿನ ಅರೇಅಂಗಡಿಯ ಸಿರಿಬಿಎಸ್‌ಡಬ್ಲ್ಯೂ ಕಾಲೇಜನ್ನು ಆಡಳಿತ ಮಂಡಳಿ ಬೇರೆ ಕಡೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ’ ಎಂದರು.
`ಈ ಕಾಲೇಜು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದ್ದು, ಅದೇ ನೆಪವೊಡ್ಡಿ ಕಾಲೇಜು ಸ್ಥಳಾಂತರ ಕೆಲಸ ನಡೆದಿದೆ’ ಎಂದು ದೂರಿದರು. `ಈ ವಿಷಯದಲ್ಲಿ ಧಾರವಾಡ ವಿಶ್ವ ವಿದ್ಯಾಲಯ ಸಹ ಲೋಪ ಎಸಗಿದೆ. ಈ ಬಗ್ಗೆ ಪ್ರಶ್ನಿಸಿದ ನನಗೆ ಜೀವ ಬೆದರಿಕೆ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page