6

ಹಲ್ಲೆ ಪ್ರಕರಣ: ಸಿಸಿ ಕ್ಯಾಮರಾ ತೋರಿಸದ ಬಸ್ ಮಾಲಕ

ಭಟ್ಕಳ: ಹೈದರಾಬಾದಿನಿಂದ ಭಟ್ಕಳಕ್ಕೆ ಬರುತ್ತಿದ್ದ ಯುವಕನ ಮೇಲೆ ಖಾಸಗಿ ಬಸ್’ನಲ್ಲಿ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಬಸ್ಸಿನಲ್ಲಿ ಯುವಕನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಬಸ್ ವ್ಯವಸ್ಥಾಪಕ ಮಂಗಳೂರಿನ ಮನೀಷ್ ಬುಧವಾರ ತಂಝೀo ನಿಯೋಗದವರಲ್ಲಿ ಹೇಳಿದ್ದಾರೆ. ಆದರೆ, ಬಸ್ಸಿನಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಕೊಟ್ಟಿಲ್ಲ.
ಬಸ್ ನಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಹೆಬಳೆಯ ಮುಜೀಬರ‍್ರಹ್ಮಾನ್ ಆರೋಪಿಸಿದ್ದರು. ಬುಧವಾರದಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ನೇತೃತ್ವದಲ್ಲಿ ಮಂಗಳೂರು ಖಾಸಗಿ ಬಸ್ ವ್ಯವಸ್ಥಾಪಕ ಮನೀಷ್ ಎಂಬುವವರನ್ನು ಕರೆಸಿ ಸಭೆ ನಡೆಸಿದ್ದು ಘಟನೆಯ ವಿವರವನ್ನು ಪಡೆದರು. ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾದ ಕುರಿತು ಕೇಳಿದಾಗ `ಅದು ಹಾಳಾಗಿದೆ’ ಎಂದು ಬಸ್ಸಿನವರು ಉತ್ತರ ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page