6

ಕಿರವತ್ತಿ: ‘ನೊಂದವರಿಗೆ ಪೊಲೀಸ್‌ ನೆರವು’

ಎಲ್ಲವೂ ಅಂದುಕೊಂಡಂತೆ ನಡೆದರೆ, ಯಲ್ಲಾಪುರದ ಕಿರವತ್ತಿಯಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರ ವರ್ಷದ ಒಳಗೆ ಶುರುವಾಗಲಿದೆ.
ಕಿರವತ್ತಿ ಹಾಗೂ ಸುತ್ತಲಿನ ಪ್ರದೇಶದ ಜನ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಪೊಲೀಸ್ ನೆರವು ಪಡೆಯಲು ದೂರದ ಯಲ್ಲಾಪುರ ಪಟ್ಟಣಕ್ಕೆ ಬರಬೇಕಿತ್ತು. ಅದರಲ್ಲಿಯೂ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ಪೊಲೀಸ್ ಠಾಣೆ ತಿರುಗಾಟ ದುಬಾರಿಯಾಗಿತ್ತು. ಈ ಬಗ್ಗೆ ಚಿಂತಿಸಿದ ಯಲ್ಲಾಪುರ ಸಿಪಿಐ ರಮೇಶ ಹನಾಪುರ್ ‘ಕಿರವತ್ತಿಯಲ್ಲಿ ಪೊಲೀಸ್ ನೆರವು ಕೇಂದ್ರ’ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಿರವತ್ತಿಯಲ್ಲಿ ಆರೋಗ್ಯ ಇಲಾಖೆಯವರು ಬಳಸಿಕೊಳ್ಳುತ್ತಿದ್ದ ಪುರಾತನ ಕಟ್ಟಡವೊಂದಿದ್ದು, ಅದು ಪೊಲೀಸ್ ಇಲಾಖೆಗೆ ಸೇರಿದೆ. 20 ಗುಂಟೆ ಜಾಗ ಸಹ ಪೊಲೀಸ್ ಇಲಾಖೆಯ ಬಳಿಯಿದೆ. ಆ ಕಟ್ಟಡ ನವೀಕರಣಗೊಳಿಸಿ, ಅಲ್ಲಿ ‘ಪೊಲೀಸ್ ನೆರವು ಕೇಂದ್ರ’ ಸ್ಥಾಪಿಸುವ ಯೋಜನೆ ಅಧಿಕಾರಿಗಳ‌ ಮುಂದಿದೆ.
ಈ ನೆರವು ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ ವಿಶ್ರಾಂತಿ ಗೃಹ ಸಹ ಇರಲಿದೆ. ನಾಲ್ಕು ಸಿಬ್ಬಂದಿ ಸದಾ ಇಲ್ಲಿದ್ದು ಜನರ ಸಮಸ್ಯೆ ಆಲಿಸಲಿದ್ದಾರೆ. ಇದರಿಂದ ತುರ್ತು ಸನ್ನಿವೇಶದಲ್ಲಿ ಪೊಲೀಸರು ಯಲ್ಲಾಪುರದಿಂದ ಕಿರವತ್ತಿ ಕಡೆ ಓಡುವುದು ತಪ್ಪುತ್ತದೆ.
ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿ ವರ್ತನೆ ಬಗ್ಗೆ ನೆರವು ಪಡೆದವರು ಆನ್ಲೈನ್ ಮೂಲಕ ಮೇಲಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವ ವ್ಯವಸ್ಥೆಯೂ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಜಾರಿಯಲಿದ್ದು, ಒಟ್ಟಿನಲ್ಲಿ ಇಲ್ಲಿನ ಪೊಲೀಸರು ಇನ್ನಷ್ಟು ‘ಜನಸ್ನೇಹಿ’ ಆಗುತ್ತಿದ್ದಾರೆ.
  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page