6

ಸುಳ್ಳು ಹೇಳಿ ಸಿಕ್ಕಿಬಿದ್ದ ಪುರಸಭೆ!

ಭಟ್ಕಳದ ರಂಗಿನಕಟ್ಟೆ ಬಳಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲಾಗಿದೆ ಎಂದು ಭಟ್ಕಳ ಪುರಸಭೆ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆದರೆ, ಭಾನುವಾರ ಬೆಳಗ್ಗೆಯೇ ಆ ಸಮಸ್ಯೆ ಮುಂದುವರೆದಿದೆ.

ಹೆದ್ದಾರಿ ನೀರಿನಲ್ಲಿ ನಿಧಾನವಾದ ಆಂಬುಲೆನ್ಸ್

ನೀರು ಸರಾಗವಾಗಿ ಹೋಗಲು ದಾರಿ ಮಾಡಿಕೊಡುವುದು ಪುರಸಭೆಯ ಕರ್ತವ್ಯ. ಈ ಭಾಗದಲ್ಲಿ ಸರಿಯಾದ ಗಟಾರ ಇಲ್ಲದ ಕಾರಣ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಈ ಬಗ್ಗೆ ಸ್ಥಳೀಯರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ತಬ್ಬಿಬ್ಬಾದ ಅಧಿಕಾರಿಗಳು ಕಾಟಾಚಾರದ ಕಾಮಗಾರಿ ನಡೆಸಿದ್ದರು. ಇದರ ಜೊತೆ `ತಾವು ದೊಡ್ಡದಾಗಿ ಸಾಧನೆ ಮಾಡಿದ್ದೇವೆ’ ಎಂದು ಫೋಟೋ ಜೊತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು. ಆದರೆ, ಅದೆಲ್ಲವೂ ಸುಳ್ಳು ಎಂಬುದು ಭಾನುವಾರ ಬಹಿರಂಗಗೊoಡಿದೆ.
ಕಳೆದ ಐದು ವರ್ಷಗಳಿಂದ ರಂಗಿನಕಟ್ಟೆ ಹೆದ್ದಾರಿಯಲ್ಲಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಭಾನುವಾರ 4 ಅಡಿ ಎತ್ತರದವರೆಗೆ ನೀರು ನಿಂತಿದ್ದು, ವಾಹನಗಳಿಗೆ 1ಕಿಮೀ ಕ್ರಮಿಸಲು 20 ನಿಮಿಷ ಬೇಕಾಯಿತು. ಆಂಬುಲೆನ್ಸ್ ಸಹ ಮುಂದೆ ಚಲಿಸಲಾಗದೇ ತೊಂದರೆ ಅನುಭವಿಸಿದ್ದು, ಸೇವೆ ಸರಿ ಇಲ್ಲದಿದ್ದರೂ ಹೆದ್ದಾರಿಯ ಟೋಲ್ ವಸೂಲಿ ಮಾತ್ರ ಇನ್ನೂ ನಿಂತಿಲ್ಲ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page