6

ಟಿ ಎಸ್ ಎಸ್ ಅಂಗಳದಲ್ಲಿ ಆಣೆ – ಪ್ರಮಾಣದ ಹೋರಾಟ!

ಶಿರಸಿ: ಅಕ್ರಮ, ಅವ್ಯವಹಾರಗಳ ಜೊತೆ `ಕೊಳೆತ ಉಪ್ಪಿನಕಾಯಿ’ ಮಾರಾಟ ವಿಷಯದಿಂದಲೂ ವಿವಾದ ಅಂಟಿಸಿಕೊoಡಿದ್ದ ಶಿರಸಿಯ ಟಿ ಎಸ್ ಎಸ್ ಸಂಸ್ಥೆಯಲ್ಲಿ ಇದೀಗ `ಆಣೆ – ಪ್ರಮಾಣ’ದ ವೇದಿಕೆ ಸೃಷ್ಟಿಯಾಗಿದೆ.
`ನಾನು ಭ್ರಷ್ಟನಲ್ಲ’ ಎಂದು ಸಾರಿರುವ ಟಿಎಸ್‌ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಬಗ್ಗೆ `ದೇವರ ಮೇಲೆ ಆಣೆ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ. `ಸದಸ್ಯರು ಬಯಸಿದರೆ ಯಾವ ದೇವರ ಎದುರು ಬೇಕಾದರೂ ನಾನು ಬರುತ್ತೇನೆ. ವಿರೋಧಿಗಳು ಬಂದು ಪ್ರಮಾಣ ಮಾಡಲಿ’ ಎಂದು ಅವರು ಸವಾಲು ಹಾಕಿದ್ದಾರೆ.
`ವೈಯಕ್ತಿಕ ದ್ವೇಷದಿಂದ ಅನಗತ್ಯ ಪ್ರಕರಣ ದಾಖಲಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ವಿಶ್ವಾಸವಿದ್ದು, ಎಲ್ಲವನ್ನೂ ಎದುರಿಸಿ, ಪರಿಶುದ್ಧರಾಗಿ ನಿಲ್ಲುತ್ತೇವೆ’ ಎಂದು ಟಿ ಎಸ್ ಎಸ್ ಮಾಜಿ ಜನರಲ್ ಮ್ಯಾನೇಜರ್ ರವೀಶ ಹೆಗಡೆ ಹೇಳಿದ್ದಾರೆ. `ನನ್ನಿಂದ ಯಾರಿಗೂ ತೊಂದರೆ ಆಗಿಲ್ಲ. ಸಂಸ್ಥೆಯ ಆದಾಯವನ್ನು 22 ಕೋಟಿ ರೂಪಾಯಿಗೆ ಏರಿಸಿದ್ದು, ಸ್ಥಿರಾಸ್ತಿ 350 ಕೋಟಿ ರೂ ಆಗಿದೆ. ಇದನ್ನು ಯಾರು ಕದಿಯಲು ಸಾಧ್ಯವಿಲ್ಲ’ ಎಂದು ರವೀಶ ಹೆಗಡೆ ಹೇಳಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page