ಯಲ್ಲಾಪುರ: ಬಾಳೆಹದ್ದದ ಶ್ರೀಧರ ರಾಮಾ ಮೋಗೇರ್ (46) ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ಚವತ್ತಿ ಬಳಿಯ ಬಾಳೆಹದ್ದದ ಶ್ರೀಧರ ಮೋಗೇರ ಹಾಗೂ ಅವರ ಪತ್ನಿ ಸೌಭಾಗ್ಯ ಅವರಿಗೆ ಕೂಲಿ ಮಾಡಿ ಬದುಕು ಕಂಡಿಕೊoಡಿದ್ದರು. ಜುಲೈ 8ರಂದು ಸಂಜೆಯವರೆಗೂ ಮನೆಯಲ್ಲಿಯೇ ಇದ್ದ ಶ್ರೀಧರ ಮೊಗೆರ್ 6 ಗಂಟೆಯ ನಂತರ ಯಾರಿಗೂ ಕಾಣಿಸಿಕೊಂಡಿಲ್ಲ. ಅಕ್ಕಪಕ್ಕದವರು ಹಾಗೂ ಸಂಬoಧಿಕರ ಮನೆಗೆ ಸೌಭಾಗ್ಯ ಅವರು ಫೋನ್ ಮಾಡಿ ವಿಚಾರಿಸಿದರೂ ಪತಿಯ ಪತ್ತೆಯಾಗಿಲ್ಲ. ಎರಡು ದಿನಗಳ ಕಾಲ ಎಲ್ಲಡೆ ಹುಡುಕಾಟ ನಡೆಸಿದ ಆತನ ಸಂಬoಧಿಕರು ಈವರೆಗೂ ಆತ ಪತ್ತೆಯಾಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.








