ಕಾರವಾರ: ಊಟ, ನಿದ್ದೆ ಸರಿಯಾಗಿ ಮಾಡದೇ ದಿನವಿಡೀ ಸರಾಯಿ ಕುಡಿಯುತ್ತಿದ್ದ ಸತೀಶ್ ಗುನಗಿ (50) ಎಂಬಾತ ಅಸ್ವಸ್ಥನಾಗಿ ಸಾವನಪ್ಪಿದ್ದಾನೆ.
ಚೆಂಡಿಯಾದ ಸತೀಶ್ ಗುನಗಿ ಯಾವುದೇ ಕೆಲಸಕ್ಕೆ ತೆರಳುತ್ತಿರಲಿಲ್ಲ. ಸದಾ ಮನೆಯಲ್ಲಿಯೇ ಮದ್ಯ ಸೇವನೆ ಮಾಡಿಕೊಂಡಿರುತ್ತಿದ್ದ. ಆತನ ಪತ್ನಿ ಸಹನಾ ನೌಕಾದಳದ ಮಕ್ಕಳ ಶಾಲೆಯಲ್ಲಿ ಆಯಾ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಬದುಕಿಗೆ ಆಧಾರವಾಗಿತ್ತು. ಜುಲೈ 11ರಂದು ಬೆಳಗ್ಗೆ ಆತ ಮನೆ ಅಂಗಳದಲ್ಲಿ ಕುಸಿದು ಬಿದ್ದುದ್ದು, ಉಪಚರಿಸಲಾಯಿತು. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ, ಪ್ರಯೋಜನಕ್ಕೆ ಬರಲಿಲ್ಲ. ವೈದ್ಯರು ಆತ ಸಾವನಪ್ಪಿರುವ ಬಗ್ಗೆ ಘೋಷಿಸಿದರು.








