ಕಾರವಾರ: ಸುಂಕೇರಿಯ ದೊಡ್ಡ ಮಸೀದಿ ಬಳಿ ವಾಸವಾಗಿರುವ ಚಾಲಕ ಅಹ್ಮದ್ ಮನೆಯಲ್ಲಿ ಕಳ್ಳತನವಾಗಿದೆ.
ಜುಲೈ 14ರ ರಾತ್ರಿ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, 15ರ ರಾತ್ರಿ 10ಗಂಟೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ 14 ಲಕ್ಷ ರೂ ಮೌಲ್ಯದ ಚಿನ್ನವನ್ನು ಕಳ್ಳರು ದೋಚಿದ್ದಾರೆ. ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು 279 ಗ್ರಾಂ ತೂಕದ ಬಂಗಾರದ ಒಡುವೆಗಳನ್ನು ಕದ್ದಿದ್ದಾರೆ. ಮನೆಯಿಡೀ ಹುಡುಕಾಟ ನಡೆಸಿದರೂ ಕಳ್ಳರ ಬಗ್ಗೆ ಅಹ್ಮದ್ ಅವರಿಗೆ ಯಾವುದೇ ಕುರುಹು ಸಿಕ್ಕಿಲ್ಲ. ಅಕ್ಕ-ಪಕ್ಕದ ಮನೆಯವರಿಗೆ ಸಹ ಕಳ್ಳತನ ನಡೆದಿರುವುದು ಗೊತ್ತಾಗಿಲ್ಲ. ಇದೀಗ ಅಹ್ಮದ್ ಚಿನ್ನ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.








