ಭಟ್ಕಳ: ಮುರುಡೇಶ್ವರದ ಮಧು ಈಶ್ವರ ನಾಯ್ಕ ಅವರ ಮನೆ ಹಿತ್ತಲಿನಲ್ಲಿ ಅಪರಿಚಿತ ಶವ ದೊರೆತಿದೆ.
ಕಾಯ್ಕಿಣಿಯ ಹೇರಾಡಿಯಲ್ಲಿ ವಾಸವಿರುವ ಮಧು ನಾಯ್ಕ ಹಿತ್ತಿಲ ಕಡೆ ಹೋದಾಗ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ಕೊಚ್ಚಿಕೊಂಡು ಬಂದ ಶವ ಗಿಡಗಳಿಗೆ ಸಿಕ್ಕಿಬಿದ್ದಿದ್ದು, ಪೊದೆಯಲ್ಲಿ ಅಡಗಿದೆ. ಮೂರು ದಿನಗಳ ಹಿಂದೆ ಅಂದರೆ, ಜುಲೈ 15ರಂದು ಈ ಶವ ಅಲ್ಲಿ ಸಿಕ್ಕಿಬಿದ್ದಿರುವ ಸಾಧ್ಯತೆಗಳಿದೆ. ಬಯಲು ಹೊಳೆ ಕಟ್ಟೆಯಿಂದ ಹೇರಾಡಿಗೆ ಹರಿಯುವ ನೀರಿನ ಅಂಚಿನಲ್ಲಿ ಮಧು ಅವರ ಮನೆಯಿದ್ದು, ಹಿತ್ತಲಿಗೆ ಹೋದಾಗ ಅವರು ಶವವನ್ನು ನೋಡಿದ್ದಾರೆ. ಮೃತ ವ್ಯಕ್ತಿ 50 ವರ್ಷದವನಾಗಿದ್ದು, ಬಿಳಿ ಚುಕ್ಕಿಗಳನ್ನು ಹೊಂದಿದ ನೀಲಿ ಬಣ್ಣದ ಅಂಗಿ ಹಾಗೂ ಖಾಕಿ ಚಡ್ಡಿ ಧರಿಸಿದ್ದಾನೆ.








