ಯಲ್ಲಾಪುರ ತಾಲೂಕಿನ ಆನಗೋಡಿನ ಹಲವು ಕಡೆ ಮಳೆ ಹಾನಿಯಾಗಿದೆ.
ಕೆಳಗಿನಪಾಲ್ ಶಿವರಾಮ ಭಟ್ಟ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ನೀರನ್ನು ಹೊರಗೆ ಬಿಡುವುದು ಸವಾಲಾಗಿದೆ. ಕಪ್ಪೆಗದ್ದೆಯ ಗಜಾನನ ಭಟ್ಟ ಅವರ ಮನೆ ಅಂಚಿನ ದರೆ ಕುಸಿದಿದೆ. ಇಲ್ಲಿ ಮನೆಯವರೆಗೂ ಮಣ್ಣು ಬಂದಿದ್ದು, ಅದನ್ನು ತೆರವು ಮಾಡಲಾಗುತ್ತಿದೆ. ಜನತಾ ಕಾಲೋನಿಯ ಈಶ್ವರ ಗೌಡ ಅವರ ಮನೆ ಹತ್ತಿರ ಸಹ ದರೆ ಕುಸಿದಿದೆ. ಇಲ್ಲಿ ಮನೆಯ ಗೋಡೆ ಸಹ ಕುಸಿಯುವ ಆತಂಕ ಎದುರಾಗಿದೆ.








