ಯಲ್ಲಾಪುರ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಸ್ನಾತಕೋತರ ಪದವಿ ಓದುತ್ತಿದ್ದ ಹೊಸಳ್ಳಿಯ ಮಯೂರ ಖಿಲಾರಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ.
ಪ್ರಸ್ತುತ ಅವರು ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ಓದುತ್ತಿದ್ದಾರೆ. ಪಿಯುಸಿ ದಿನಗಳಲ್ಲಿಯೇ ರಾಜ್ಯಶಾಸ್ತ್ರ ವಿಷಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಮಯೂರ್ ಅವರು ಅದೇ ವಿಷಯವಾಗಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಮಯೂರ ಖಿಲಾರಿ ಅವರಿಗೆ ಸೆ 24ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.
ಮಯೂರ ಖಿಲಾರಿ ಅವರ ತಂದೆ ರಾಮಚಂದ್ರ ಹಾಗೂ ತಾಯಿ ಭೀಮವ್ವಾ ಅವರು ಈಗಲೂ ಕೃಷಿ ಕೂಲಿ ಕೆಲಸ ಮಾಡುತ್ತಾರೆ. ಅವರ ಅಣ್ಣ ಯಲ್ಲಪ್ಪ ಖಿಲಾರಿ ಸಹ ಕೃಷಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅತ್ಯಂತ ಹಿಂದೂಳಿದ ಸಮುದಾಯದ ಮಯೂರ ಖಿಲಾರಿಯ ಸಾಧನೆ ನೋಡಿ ಗಜಾನನೋತ್ಸವ ಸಮಿತಿ ಹೊಸಳ್ಳಿ ಅಧ್ಯಕ್ಷರಾದ ಆನಂದ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಇಡೀ ಊರಿಗೆ ಕೀರ್ತಿ ತಂದ ಮಯೂರ ಅವರಿಗೆ ಊರಿನ ಯುವಕರು ರಚಿಸಿಕೊಂಡಿರುವ ಯುಗಾದಿ ಉತ್ಸವ ಸಮಿತಿ, ಊರಿನ ಶಾಲಾ ಆಡಳಿತ ಮಂಡಳಿ-ಶಿಕ್ಷಕ ವರ್ಗದವರೆಲ್ಲ ಸೇರಿ ಬುಧವಾರ ಸನ್ಮಾನವನ್ನು ಆಯೋಜಿಸಿದ್ದಾರೆ. `ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ರಾಜ್ಯಶಾಸ್ತ್ರ ಅಧ್ಯಯನದಿಂದ ಏಳು ಚಿನ್ನದ ಪದಕ ಪಡೆದಿರುವುದು ದೊಡ್ಡ ಸಾಧನೆ. ಸೌಮ್ಯ ಸ್ವಭಾವದ, ಉತ್ತಮ ವ್ಯಕ್ತಿತ್ವ ಹೊಂದಿರುವ ಮಯೂರ ಊರಿಗೆ ಕೀರ್ತಿ ತಂದಿರುವುದು ಎಲ್ಲರಿಗೂ ಖುಷಿ ನೀಡಿದೆ’ ಎಂದು ಕಿರವತ್ತಿ ಗ್ರಾ ಪಂ ಸದಸ್ಯ ಸುನೀಲ್ ಕಾಂಬಳೆ ಸಂತಸ ಹಂಚಿಕೊoಡರು.
ಊರಿನ ಪ್ರಮುಖರಾದ ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ, ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾoತ್ ಪಾಟೀಲ್, ವಿಜಯ ಕಾಂಬಳೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು ಕಾಂಬಳೆ, ಸಂತೋಷ ಬನ್ನೇಣ್ಣವರ, ಅಜಯ ಕಾಂಬಳೆ, ರುಸ್ತಂ ಶೇಖ, ನಾಗರಾಜ ಕದಂ ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ಲಕ್ಷಣ ಚಿನ್ನಪ್ಪಗೋಳ, ಹಸನ ಬಿಜಾಪುರ, ಶಾರುಖ್ ಬಿಜಾಪುರ, ಅಭಿಷೇಕ ಕದಂ, ವಿನೋದ ಚವ್ಹಾನ ಇನ್ನಿತರರು ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.